welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 26 January 2015

ಸಮಾರೋಪ ಸಮಾರಂಭ



BHARAT SCOUT ES & GUIDES  RALLY ಯ ಸಮಾರೋಪ ಸಮಾರಂಭವು ಮಂಜೇಶ್ವರ ಬ್ಲೋಕ್ ಪಂಚಾಯತಿನ  ಅಧ್ಯಕ್ಷರಾದ Smt.Mumtaz Sameera ಇವರ ಘನ ಅಧ್ಯಕ್ಷತೆಯಲ್ಲಿ ಬಾಕ್ರಬೈಲು ಶಾಲಾ ವೇದಿಕೆಯಲ್ಲಿ ಜರಗಿತು.ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ "ಮಕ್ಕಳ ಸ್ವಯಂ ರಕ್ಷಣೆಗೆ, ಸಮಯ ಪಾಲನೆಗೆ, ಶಿಸ್ತಿನಿಂದ ಜೀವನ ನಡೆಸಲು, ಈ ಸ್ಕೌಟ್ ಶಿಬಿರವು ಸಹಾಯಕವಾಗಿದೆ ಈ ನಿಟ್ಟಿನಲ್ಲಿ ರಕ್ಷಕರ ಪಾತ್ರ ಮಹತ್ತರವಾಗಿದೆ.ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತಾಗಲಿ" ಎಂದು ಹೇಳಿದರು. ತರುವಾಯ ಮುಖ್ಯ ಅತಿಥಿಗಳಾದ ಶ್ರೀಮತಿ ಭಾರತಿ ಯಸ್,ಅಭಿವೃದ್ಧಿ ಸ್ಥಾಯಿ ಸಮಿತಿ ವರ್ಕಾಡಿ ಗ್ರಾಮ ಪಂಚಾಯತ್ ಇವರು ತಮ್ಮ ಭಾಷಣದಲ್ಲಿ ಇಂದಿನ ವಿದ್ಯಾರ್ಥಿಗಳು ಕಷ್ಟವನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು,ದೇಶಪ್ರೇಮವನ್ನು ಹೇಗೆ ಬೆಳೆಸಬಹುದು,ಎಂಬುದನ್ನು ಸ್ಕೌಟ್ ತರಬೇತಿ ಮೂಲಕ ಪಡೆದು,ತಮ್ಮ ಜೀವನದಲ್ಲಿ ಅಳವಡಿಸಿ,ದೇಶದ ಉತ್ತಮ ಪ್ರಜೆಗಳಾಗಲಿ ಎಂದು ಆಶಿಸಿದರು.
ಮಂಜೇಶ್ವರ ಬ್ಲೋಕ್ ಪಂಚಾಯತಿನ  Welfare Standing cammittee Chairman Sri Moosa kunhi,ವರ್ಕಾಡಿ ಗ್ರಾಮ ಪಂಚಾಯತಿನ ಸದಸ್ಯರಾದ Sri Razak kedambadi, ಬಾಕ್ರಬೈಲು ಶಾಲಾ ಯಂ.ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಆರ್ವಾರ್, ಜಿಲ್ಲಾ ಸ್ಕೌಟ್ ಸಹಾಯಕ ಕಮಿಷನರ್  ಶ್ರೀ ಚೇವಾರ್ ವಿನೋದ್ ಇವರು ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಉಮಾವತಿ ಪಿ ಸಾಂತಾ,ನಿವೃತ್ತ ಅದ್ಯಾಪಕರು ಹಾಗೂ ಕಾಸರಗೋಡು ಜಿಲ್ಲೆಯ ಹಿರಿಯ ಸ್ಕಾಟ್ ತರಬೇತುದಾರರಾದ ಶ್ರೀ ವಿಶ್ವನಾಥ ಆಳ್ವ, ಬಾಕ್ರಬೈಲು ಶಾಲಾ
ಮೇನೇಜರ್ ಶ್ರೀ ಪಿ.ಮೋಹನ್ ರಾವ್, ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್,
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್, ಉಪಸ್ಥಿತರಿದ್ದರು.ಬಳಿಕ ವಿವಿಧ ಶಾಲೆಗಳಿಂದ ಆಗಮಿಸಿ ಈ  RALLY ಯಲ್ಲಿ ಭಾಗವಹಿಸಿದ ಸ್ಕಾಟ್ & ಗೈಡ್ ಟ್ರೂಪಿನ ತರಬೇತುದಾರರಿಗೆ ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಬಳಿಕ ಶಿಬಿರಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ನೀಡಿದರು. ವಿನೋದ್ ಚೇವಾರ್  (Asst.Dist.Commissioner Scouts) ಇವರು ಅಭಿನಂದನಾ ಭಾಷಣ ಮಾಡಿ ಬಾಕ್ರಬೈಲು ಶಾಲೆಗೆ ಸ್ಮರಣಿಕೆ ನೀಡಿದರು. ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್ ಪಿ.ಕೆ.ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಸಹಾಯಕ ಅಧ್ಯಾಪಕರಾದ ಶ್ರೀ. ಬಿ.ಮೋಹನ ಇವರು ಕಾರ್ಯಕ್ರಮ ನಿರೂಪಿಸಿದರು. Secretary , Bharat Scouts & Guides Manjeshwar Local Association Sri Peter Rodrigues ಇವರು ಸ್ಕೌಟ್ ಶಿಬಿರದ ಕಾರ್ಯಚಟುವಟಿಕೆಗಳ ಸಮಗ್ರ ವರದಿಯನ್ನು ವಾಚಿಸಿ ಧನ್ಯವಾದ ಸಮರ್ಪಿಸಿದರು. 








No comments:

Post a Comment