welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 29 June 2015

ಮಂತ್ರಿ ಮಂಡಲ ರೂಪೀಕರಣ


           2015 - 16 ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಮಂತ್ರಿ ಮಂಡಲವನ್ನು ರೂಪೀಕರಿಸಿ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು  ನಮ್ಮ ಶಾಲಾ ಹಿರಿಯ ಅಧ್ಯಾಪಕರಾದ ವಿ. ಮಾಧವ ನಾವಡ ಅವರು ನೆರವೇರಿಸಿದರು.

Thursday 25 June 2015

ವಿವಿಧ ಸಂಘಗಳ ರೂಪೀಕರಣ ಹಾಗೂ ವಾಚನಾವಾರಾಚರಣೆ











ದಿನಾಂಕ 16-6-15 ರಂದು ನಮ್ಮಶಾಲೆಯಲ್ಲಿ ಎಲ್.ಪಿ ಹಾಗೂ ಯು.ಪಿ ಮಟ್ಟದಲ್ಲಿ ವಿವಿಧ ಸಂಘಗಳ ರೂಪೀಕರಣ ಮಾಡಲಾಯಿತು.
 
ದಿನಾಕ 19-6-15 ರಂದು ಬೆಳಿಗ್ಗೆ ಪಿ,ಯನ್.ಪಣಿಕ್ಕರ್ ರವರ ಚರಮ ದಿನದಂದು ಶಾಲೆಯಲ್ಲಿ ವಾಚನಾವಾರದ  ಅಂಗವಾಗಿ  ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಯಿತು.ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ಈ ಪುಸ್ತಕಗಳನ್ನು ವೀಕ್ಷಿಸಿದರು.








ಅಂದು ಮಧ್ಯಾಹ್ನವಾಚನಾವಾರದ ಉದ್ಘಾಟನೆಯನ್ನು ಹಿರಿಯ ಅಧ್ಯಾಪಕರಾದ ವಿ.ಮಾಧವ ನಾವಡ ಅವರು ನೆರವೇರಿಸಿದರು ಹಾಗೂ ಅಧ್ಯಕ್ಷ ಸ್ಥಾನವನ್ನು ಸಹಾಯಕ ಅಧ್ಯಾಪಕರಾದ ಮೋಹನ ಬಿ ಅವರು ವಹಿಸಿ ವಾಚನಾವಾರದ ಮಹತ್ವ,ಪಿ,ಯನ್.ಪಣಿಕ್ಕರ್ ರವರ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

Friday 5 June 2015

ವಿಶ್ವ ಪರಿಸರ ದಿನಾಚರಣೆ





 2015-16 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಇಕೋ ಕ್ಲಬ್ ನ ವತಿಯಿಂದ ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್  ಇವರ ನೇತೃತ್ವದಲ್ಲಿವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಪರಿಸರದಲ್ಲಿ ಆಚರಿಸಲಾಯಿತು. ಶಾಲಾ ಮುಖ್ಯೋಪಾದ್ಯಾಯರು ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
 ಇದರ ಅಂಗವಾಗಿ ಸರಕಾರ ನೀಡಿರುವ ಉಚಿತ ಗಿಡಗಳನ್ನು ಮಕ್ಕಳಿಗೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಳಿಕ ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು.


ಜಂಟಿ ಯಸ್.ಆರ್.ಜಿ.


2015-16 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಂಟಿ ಯಸ್.ಆರ್.ಜಿ.ಸಭೆಯು ದಿನಾಂಕ 1-6-15 ರಂದು ಜರಗಿತು.ಶಾಲಾ ಮುಖ್ಯೋಪಾದ್ಯಾಯರು ಜೂನ್ ತಿಂಗಳಲ್ಲಿ ಜರಗಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿ ಜವಾಬ್ದಾರಿಗಳನ್ನು ಹಂಚಿದರು 

Monday 1 June 2015

ಪ್ರವೇಶೋತ್ಸವ 2015-16


         ಬಾಕ್ರಬೈಲು ಎ.ಯು.ಪಿ.ಶಾಲೆಯ 1-6-2015 ಸೋಮವಾರದಂದು 10 ಗಂಟೆಗೆ ಸರಿಯಾಗಿ ಪಿ.ಟಿ.ಎ.ಅಧ್ಯಕ್ಷರಾದ ಇ.ಯಂ.ಇಬ್ರಾಹಿಂ ಅವರ ಘನ ಅಧ್ಯಕ್ಷತೆಯಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಸಭಾಂಗಣದಲ್ಲಿ ಜರಗಿತು.ಈ ಶೈಕ್ಷಣಿಕ ವರ್ಷದ ವಿಶೇಷತೆ ಎಂದರೆ ಪ್ರಿ-ಪ್ರೈಮರಿ ಹಾಗೂ ಆಂಗ್ಲ ಮಾಧ್ಯಮ ಪ್ರಥಮ ತರಗತಿ ಆರಂಭ ಗೊಂಡುದುದೇ ಆಗಿದೆ. ಇದು ನವಚೇತನ ಎಲ್ಲರಲ್ಲೂ ಉಂಟುಮಾಡಿತು.


                                                ಶಾಲಾ ಅಧ್ಯಾಪಿಕೆಯರಿಂದ  ಪ್ರಾರ್ಥನೆ

         ವರ್ಕಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ  ಶ್ರೀ.ಪಿ.ಬಿ.ಅಬೂಬಕರ್ ರವರು ಔಪಚಾರಿಕವಾಗಿ ಉದ್ಘಾಟಿಸಿದರು. ಬಳಿಕ ಶ್ರೀಯುತರು  ಪ್ರಿ-ಪ್ರೈಮರಿ ಹಾಗೂ ಆಂಗ್ಲ ಮಾಧ್ಯಮ ಪ್ರಥಮ ತರಗತಿಯ ಮಕ್ಕಳಿಗೆ ಕಲಿಕಾ ಕಿಟ್ ನ್ನು ನೀಡುವುದರ ಮೂಲಕ ಮಕ್ಕಳಲ್ಲಿ ಸಂತಸದ ಚಿಲುಮೆ ಸಂಚಯನಗೊಳಿಸಿದರು.

ಪ್ರವೇಶೋತ್ಸವ ಗೀತೆಯ ಸಿ.ಡಿ.ಕೇಳುವುದರ ಮೂಲಕ ಇದು  ಎಲ್ಲರಲ್ಲೂ ನವ ಚೈತನ್ಯ ಮೂಡಿಸಿ ತು. 

      ವರ್ಕಾಡಿ ಗ್ರಾಮಪಂಚಾಯತ್ ಅಧ್ಯಕ್ಷೆಯಾದ ಉಮಾವತಿ ಪಿ ಸಾಂತಾ ಅವರು ಮಕ್ಕಳಿಗೆ ಶುಭವನ್ನು ಕೋರಿ ಶಾಲಾಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ದೊರಕುವಂತಾಗಲಿ.  


ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ನಡಿಬೈಲು ಇವರು ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲಿ ಎಂದು ಶುಭಹಾರೈಸಿದರು.





ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಇವರು ಅತಿಥಿಗಳನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಭಾಷಣ ಮಾಡಿದರು.


ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಇವರು ಕಾರ್ಯಕ್ರಮ ನಿರೂಪಿಸಿದರು.
ಪ್ರಿ-ಪ್ರೈಮರಿ ತರಗತಿಗೆ 52 ವಿದ್ಯಾರ್ಥಿಗಳೂ,ಆಂಗ್ಲ ಮಾಧ್ಯಮ ಪ್ರಥಮ ತರಗತಿಗೆ 56 ವಿದ್ಯಾರ್ಥಿಗಳೂ ದಾಖಲಾತಿಯನ್ನು ಪಡೆದಿದ್ದರು. ಬಾಕ್ರಬೈಲು ಶಾಲೆಯ ಚರಿತ್ರೆಯಲ್ಲಿಯೇ ಇದೊಂದು ಮೈಲುಗಲ್ಲಾಗಿದೆ. 





ಈ ಸಂದರ್ಭದಲ್ಲಿ ನಮ್ಮಶಾಲಾ ಅರೇಬಿಕ್ ಅಧ್ಯಾಪಿಕೆ ಫರೀದಾ ರವರು ಎಲ್ಲಾ ವಿದ್ಯಾರ್ಥಿಗಳಿಗೂ ರಕ್ಷಕರಿಗೂ ಸಿಹಿಯನ್ನು ಹಂಚಿದರು.

              ಕಾರ್ಯಕ್ರಮದ ಕೊನೆಯಲ್ಲಿ ಸ್ಟಾಪ್ ಸೆಕ್ರೆಟರಿ ಅಬ್ದುಲ್ ಕರೀಂ ಅವರು ಧನ್ಯವಾದಗೈದರು.