welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

ABOUT US

         ಬಾಕ್ರಬೈಲು  ಎ.ಯು.ಪಿ.ಶಾಲೆಯು  ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. 
         ಕ್ರಿ.ಶ 1897ರಲ್ಲಿ ಪ್ರಸ್ತುತ ಶಾಲೆ ಇರುವುದಕ್ಕಿಂತ ಸುಮಾರು 1 ಕಿ.ಮೀ ದೂರದಲ್ಲಿ ನಡಿಬೈಲಿನ ಪಳ್ಳದ ಬಳಿ ಅಂದಿನ ಬಾಕ್ರಬೈಲಿನ ಹೆಸರಾಂತ ಬಂಟರ ಶ್ರೀಮಂತ ಮನೆತನದವರು ಮುಳಿ ಛಾವಣಿಯ ಸಣ್ಣ ಕಟ್ಟಡದಲ್ಲಿ ಪ್ರಾರಂಭಿಸಿದರು. ಆ ಕಾಲಘಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಹಾಗೂ ಓರ್ವ ಅಧ್ಯಾಪಕರು ಈ ವಿದ್ಯಾಲಯದಲ್ಲಿ ಇದ್ದರು. ಕೆಲವು ವರ್ಷಗಳ ಬಳಿಕ ದಿ| ರಾಮಯ್ಯ ಅಡಪರ ನೇತೃತ್ವದಲ್ಲಿ ಈಗಿನ ಸ್ಥಳದಲ್ಲಿ ಬಾಕ್ರಬೈಲು ಮನೆತನದವರು ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಸ್ಥಳಾಂತರಿಸಿದರು. ಹೊಸ ಕಟ್ಟಡದಲ್ಲಿ ಶಾಲೆ ನಿರಂತರ ಅಭಿವೃದ್ಧಿ ಪಥದಲ್ಲಿ ಸಾಗಿತ್ತಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ಬಾಕ್ರಬೈಲು ಮನೆತನದ ಹಲವಾರು ಮಂದಿ ತಮ್ಮ ಕುಟುಂಬದ ಹಿರಿಮೆಯನ್ನು ಬಿಟ್ಟು ಅಳಿಯ ಪದ್ಧತಿಗೆ ಪೂರಕವಾಗಿ ಬೇರೆಬೇರೆ ಕಡೆಗಳಲ್ಲಿ ಇರುವ ಆಸ್ತಿಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗ ಶಾಲೆಯ ಮೇಲ್ವಿಚಾರಣೆಯನ್ನು ಶಾಲಾ ಅಧ್ಯಾಪಕರಾದ ಹತ್ತುಮುಡಿ ಜಿ. ಶಂಕರನಾರಾಯಣಪ್ಪಯ್ಯರಿಗೆ ವಹಿಸಿಕೊಟ್ಟರು. ಮುಂದೆ ಅವರು ಶಾಲಾ ಮೆನೇಜರ್ ಮತ್ತು ಮುಖ್ಯೋಪಾಧ್ಯಾಯರಾದರು. ಹೀಗೆ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಇವರ ಪಾತ್ರ ಅವಿಸ್ಮರಣೀಯವಾಗಿದೆ. 1967ರಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ VI & VII ತರಗತಿಗಳಾಗಿ ಭಡ್ತಿಗೊಂಡಿತು. ಪ್ರಸ್ತುತ ಈ ಶಾಲೆಯಲ್ಲಿ 386 ವಿದ್ಯಾರ್ಥಿಗಳೂ 17 ಅಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 


No comments:

Post a Comment