welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Saturday 25 July 2015

NUTRICIOUS FOOD








         ಮಕ್ಕಳಿಗೆ ಪೋಷಕ ಆಹಾರದ ಅರಿವನ್ನು ಉಂಟು ಮಾಡಿಸಲು , ಅದರ ಮಹತ್ವವನ್ನು ತಿಳಿಸಿ ನ್ಯೂ ಟ್ರೀಶಿಯನ್ Office ನಿಂದ ಪ್ರತೀ ಶಾಲೆಗೆ ಕೊಟ್ಟಂತಹ  D.V.D  ಯನ್ನು ಪ್ರದರ್ಶಿಸಲಾಯಿತು.

ಚಾಂದ್ರ ದಿನ










 ದಿನಾಂಕ 21-7-15ರಂದು ನಮ್ಮ ಶಾಲಾ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಅಧ್ಯಾಪಕರಾದ ರಾಜೇಶ್ ಕಾರಂತ್ ಇವರು ವಿದ್ಯಾರ್ಥಿಗಳಿಗೆ ಕೆಲವೊಂದು ವೀಡಿಯೋ ಕ್ಲಿಪ್ಪಿಂಗ್ ನ್ನು ಪ್ರದರ್ಶಿಸುವುದರ ಮೂಲಕ ಚಾಂದ್ರ ದಿನದ ಮಹತ್ವವನ್ನು ತಿಳಿಸಿದರು.  

Friday 17 July 2015

ತರಗತಿಯಲ್ಲಿ ನಡೆಸಿದ ಪ್ರಯೋಗ




ಶಾಲಾ ಅಧ್ಯಾಪಕರಾದ ಶ್ರೀಯುತ ಗಣೇಶ್ ಕುಮಾರ್ ರವರು 5 ನೇ ತರಗತಿಯಲ್ಲಿ ವಿಜ್ಞಾನದ ಪ್ರಯೋಗವನ್ನು ಮಾಡಿ ತೋರಿಸಿದರು.

ಶಾಲಾ ಪ್ರಥಮ ಪಾರ್ಲಿಮೆಂಟ್ ಅಧಿವೇಶನ













Sunday 12 July 2015

ವಿಶ್ವ ಜನಸಂಖ್ಯಾ ದಿನ

















ವಿಶ್ವ ದಿನಾಚರಣೆಯ ಅಂಗವಾಗಿ ಅಧ್ಯಾಪಕರು  ಪ್ಯಾನಲ್ ಚರ್ಚೆಯನ್ನು ದಿನಾಂಕ 10-7-15 ರಂದು ನಡೆಸಿದರು.

ವನಮಹೋತ್ಸವ ವಾರಾಚರಣೆ





         ದಿನಾಂಕ 10-7-15 ರಂದು ವನಮಹೋತ್ಸವದ ಮಹತ್ವವನ್ನು ಎಲ್ಲಾ ತರಗತಿಗಳಲ್ಲೂ ತಿಳಿಸಲಾಯಿತು. ಮಾತ್ರವಲ್ಲದೆ ನೆಟ್ಟ ಗಿಡದ ಸಂರಕ್ಷಣೆಯ ಬಗ್ಗೆಯೂ ಮಾಹಿತಿ ನೀಡಲಾಯಿತು. ಇದರ ಅಂಗವಾಗಿ ನಮ್ಮ ಶಾಲೆಯಲ್ಲಿ ಇಕೋ ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಹಯೋಗದೊಂದಿಗೆ ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. 

Staff meeting





ದಿನಾಂಕ 1-7-15 ರಂದು ಜುಲೈ ತಿಂಗಳ ಸ್ಟಾಪ್ ಮೀಟಿಂಗ್ ನಡೆಯಿತು. ಹಿಂದಿನ ತಿಂಗಳ ಕಾರ್ಯ ಚಟುವಟಿಕೆಗಳ ಅವಲೋಕನ ಹಾಗೂ ಈ ತಿಂಗಳ ಕಾರ್ಯ ಚಟುವಟಿಕೆಗಳು ಮತ್ತು ದಿನಾಚರಣೆಗಳ ಜವಾಬ್ದಾರಿಯನ್ನು ಹಂಚಲಾಯಿತು.

Sunday 5 July 2015

ಶಾಲಾ ತರಕಾರಿ ತೋಟ

              

            ಇಕೋ ಕ್ಲಬ್ ನ ವತಿಯಿಂದ ಶಾಲಾ ತರಕಾರಿ ತೋಟದಲ್ಲಿ ವಿವಿಧ ತರಕಾರಿ ಗಿಡಗಳನ್ನು ನೆಡಲಾಯಿತು.


Saturday 4 July 2015

ಮಾದಕ ವಸ್ತು ವಿರೋಧಿ ದಿನ


         ಬಾಕ್ರಬೈಲು.ಎ.ಯು.ಪಿ. ಶಾಲೆಯಲ್ಲಿ ಜೂನ್ 25 ನೇ ತಾರೀಕು ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಹಿರಿಯ ಅಧ್ಯಾಪಕರಾದ ಶ್ರೀಯುತ ಮಾಧವ ನಾವಡ ಅವರು ಉದ್ಘಾಟಿಸಿ ದಿನದ ಮಹತ್ವವನ್ನು ತಿಳಿಸಿದರು.ಎಂದು ವಿಶ್ವದಲ್ಲಿ ಮಾದಕ  ವಸ್ತುಗಳ ಸೇವನೆ ದುಶ್ಚಟಗಳು ಕಂಡುಬಂದು ನಂತರ ಇದು ಚಟವಾಗಿ ಹೊರಹೊಮ್ಮಿ ಅದನ್ನು ನಿಲ್ಲಿಸಲಾರದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ಷೀಣಗೊಂಡು ಆ ವ್ಯಕ್ತಿಯ ಶರೀರ, ಕುಟುಂಬ, ಸಮಾಜವೇ ನಿರ್ಗತಿಕರಾಗುವುದನ್ನು ಕಾಣಬಹುದು.




        ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಜೂನ್ 26 ನೇ ತಾರೀಕನ್ನು ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ನಮ್ಮ ಶಾಲೆಯಲ್ಲಿ ಅಧ್ಯಾಪಕ ವೃಂದ ಬಹಳ ವಿಶಿಷ್ಟ ರೀತಿಯಲ್ಲಿ ಮೋಜಿಗಾಗಿ ಮೋಜಿಗಾಗಿ ಆರಂಭಿಸಿದ ಮಾದಕ ವಸ್ತುವಿನ ಸೇವನೆಯು ಮುಂದೆ ಚಟವಾಗಿ ಪರಿಣಮಿಸಿ ಯಾವ ಕ್ಷಣದಲ್ಲಿಯೂ ಅದನ್ನು ಬಿಟ್ಟಿರಲಾರದ ಪರಿಸ್ತಿತಿ ನಿರ್ಮಾಣವಾಗುತ್ತಿದೆ.ಅದನ್ನು ಹೋಗಲಾಡಿಸಲು ಇಂದಿನ ಯುವ ಜನತೆಗೆ ಸೂಕ್ತವಾದ ಮಾರ್ಗದರ್ಶನ,ತಿಳುವಳಿಕಾ ಶಿಬಿರ,ಕೌನ್ಸಿಲಿಂಗ್ ಮುಂತಾದುವುಗಳನ್ನು ಏರ್ಪಡಿಸುವುದರ ಮೂಲಕ ಅದರ ನಿರ್ಮೂಲನೆ ಸಾಧ್ಯ ಎಂಬುದನ್ನು ಕಿರು ಪ್ರಹಸನದ ಮೂಲಕ ಸಾಕ್ಷೀಕರಿಸಲಾಯಿತು.





.     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಹಾಯಕ ಅಧ್ಯಾಪಕರಾದ ಮೋಹನ.ಬಿ. ಅವರು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾದಕ ವಸ್ತು ವಿರುದ್ಧದ ಘೋಷಣಾವಾಕ್ಯ ಹಾಗೂ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.