ಬಾಕ್ರಬೈಲು.ಎ.ಯು.ಪಿ. ಶಾಲೆಯಲ್ಲಿ ಜೂನ್ 25 ನೇ ತಾರೀಕು ವಿಶ್ವ ಮಾದಕ ವಸ್ತು ವಿರೋಧಿ
ದಿನಾಚರಣೆಯನ್ನು ಹಿರಿಯ ಅಧ್ಯಾಪಕರಾದ ಶ್ರೀಯುತ ಮಾಧವ ನಾವಡ ಅವರು ಉದ್ಘಾಟಿಸಿ ದಿನದ ಮಹತ್ವವನ್ನು
ತಿಳಿಸಿದರು.ಎಂದು ವಿಶ್ವದಲ್ಲಿ ಮಾದಕ ವಸ್ತುಗಳ
ಸೇವನೆ ದುಶ್ಚಟಗಳು ಕಂಡುಬಂದು ನಂತರ ಇದು ಚಟವಾಗಿ ಹೊರಹೊಮ್ಮಿ ಅದನ್ನು ನಿಲ್ಲಿಸಲಾರದೆ
ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ಷೀಣಗೊಂಡು ಆ ವ್ಯಕ್ತಿಯ ಶರೀರ, ಕುಟುಂಬ, ಸಮಾಜವೇ
ನಿರ್ಗತಿಕರಾಗುವುದನ್ನು ಕಾಣಬಹುದು.
ಈ ನಿಟ್ಟಿನಲ್ಲಿ ವಿಶ್ವದಾದ್ಯಂತ
ಜೂನ್ 26 ನೇ ತಾರೀಕನ್ನು ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ
ಪ್ರಯುಕ್ತ ನಮ್ಮ ಶಾಲೆಯಲ್ಲಿ ಅಧ್ಯಾಪಕ ವೃಂದ ಬಹಳ ವಿಶಿಷ್ಟ ರೀತಿಯಲ್ಲಿ ಮೋಜಿಗಾಗಿ ಮೋಜಿಗಾಗಿ
ಆರಂಭಿಸಿದ ಮಾದಕ ವಸ್ತುವಿನ ಸೇವನೆಯು ಮುಂದೆ ಚಟವಾಗಿ ಪರಿಣಮಿಸಿ ಯಾವ ಕ್ಷಣದಲ್ಲಿಯೂ ಅದನ್ನು
ಬಿಟ್ಟಿರಲಾರದ ಪರಿಸ್ತಿತಿ ನಿರ್ಮಾಣವಾಗುತ್ತಿದೆ.ಅದನ್ನು ಹೋಗಲಾಡಿಸಲು ಇಂದಿನ ಯುವ ಜನತೆಗೆ
ಸೂಕ್ತವಾದ ಮಾರ್ಗದರ್ಶನ,ತಿಳುವಳಿಕಾ ಶಿಬಿರ,ಕೌನ್ಸಿಲಿಂಗ್ ಮುಂತಾದುವುಗಳನ್ನು ಏರ್ಪಡಿಸುವುದರ
ಮೂಲಕ ಅದರ ನಿರ್ಮೂಲನೆ ಸಾಧ್ಯ ಎಂಬುದನ್ನು ಕಿರು ಪ್ರಹಸನದ ಮೂಲಕ ಸಾಕ್ಷೀಕರಿಸಲಾಯಿತು.
![]() |
![]() |
. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಹಾಯಕ
ಅಧ್ಯಾಪಕರಾದ ಮೋಹನ.ಬಿ. ಅವರು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ
ಸೂಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾದಕ ವಸ್ತು ವಿರುದ್ಧದ ಘೋಷಣಾವಾಕ್ಯ ಹಾಗೂ ಪ್ರತಿಜ್ಞೆಯನ್ನು
ಕೈಗೊಳ್ಳಲಾಯಿತು.
No comments:
Post a Comment