welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Thursday 26 February 2015

ಅಮ್ಮ ತಿಳಿಯಲು






         2014-2015 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ S S A ವತಿಯಿಂದ Minority Training ಅಮ್ಮ ತಿಳಿಯಲು ನ ಕಾರ್ಯಕ್ರಮವು ದಿನಾಂಕ 26-02-15 ನೇ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಶಾಲಾ ಸಭಾಂಗಣದಲ್ಲಿ ಆರಂಭವಾಯಿತು.
          ಕಾರ್ಯಕ್ರಮವನ್ನು ವರ್ಕಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರೂ,ನಮ್ಮ ವಾರ್ಡಿನ ಸದಸ್ಯರೂ ಆದ  ಶ್ರೀ.ಪಿ.ಬಿ.ಅಬೂಬಕ್ಕರ್ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.ಇವರು ತಮ್ಮ ಭಾಷಣದಲ್ಲಿ ಮಕ್ಕಳ ಆರಂಭದ ವಿದ್ಯಾಭ್ಯಾಸವು ಮನೆಯಲ್ಲಿ,ಅಮ್ಮನ ಮಡಿಲಿನಲ್ಲಿ ಮಾತೆಯರು ಈ ಅಮ್ಮ ತಿಳಿಯಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಪಡೆದು ಇದರ ಸದುಪಯೋಗವನ್ನು ಪಡೆಯುವಂತಾಗಲಿ. ಎಂದು ಕರೆ ನೀಡಿದರು.


       ಬಳಿಕ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್ ತಮ್ಮ ಭಾಷಣದಲ್ಲಿ ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಆದುದರಿಂದ ಮಕ್ಕಳು ಮನೆಯಲ್ಲಿಯೇ ಈ ಜ್ಞಾನವನ್ನು ಮಾತೆಯರಿಂದ  ಪಡೆಯುತ್ತಾರೆ.ಬಳಿಕ ಶಾಲೆಯಲ್ಲಿ ಅಧ್ಯಾಪಕರ ನೀತಿ ಬೋಧನೆಯೊಂದಿಗೆ ಗಳಿಸುತ್ತಾರೆ.ಮಾತೆಯರು ತಮ್ಮ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಪಡೆಯುವಂತಾಗಲು  ಅಮ್ಮ ತಿಳಿಯಲು ಈ ಕಾರ್ಯಕ್ರಮವು ಒಂದು ಒಳ್ಳೆಯ ವೇದಿಕೆಯಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಯಂ.ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಆರ್ವಾರ್ ಇವರು ಉಪಸ್ಥಿತರಿದ್ದರು.

       ಬಿ.ಆರ್.ಸಿ ಟ್ರೈನರ್ ರಾಣಿ ವಾಸುದೇವನ್,ಹಾಗೂ ಉಷಾ ಇವರು  ಅಮ್ಮ ತಿಳಿಯಲು ಇದರ ಬಗ್ಗೆ ಸೂಕ್ತ ಮಾಹಿತಿ ನೀಡಿದರು.ಈ ಕಾರ್ಯಕ್ರಮದ ಅಧ್ಯಕ್ಷರು, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್, ಅಮ್ಮ ಅರಿಯಾನ್ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವಂತಾಗಲಿ.  ಮಾತೆಯರು ತಮ್ಮ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.


         ಬಾಕ್ರಬೈಲು ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಅತಿಥಿಗಳನ್ನು ಸ್ವಾಗತಿಸಿದರು.


            .ಶಾಲಾ ಸಹಾಯಕ ಅಧ್ಯಾಪಿಕೆಯಾದ ಶ್ರೀಮತಿ  ಶಕೀಲ ಇವರು ಕಾರ್ಯಕ್ರಮ ನಿರೂಪಿಸಿದರು.



                                    ಕಾರ್ಯಕ್ರಮದ ಕೊನೆಗೆ ಶ್ರೀಮತಿ ದೀಪಾ ಧನ್ಯವಾದಗೈದರು.

       ಬಳಿಕ ವೀಡಿಯೋ ಕ್ಲಿಪ್ಪಿಂಗ್ ತೋರಿಸುವುದರ ಮೂಲಕ ಅಮ್ಮ ಅರಿಯಾನ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತೆಯರೊಂದಿಗೆ ಪರಸ್ಪರ ಚರ್ಚಿಸಿ , ಮಾತೆಯರು ಮಕ್ಕಳ ಬಗ್ಗೆ ವಹಿಸಿಕೊಳ್ಳಬೇಕಾದಜವಾಬ್ದಾರಿ,ಮಕ್ಕಳ ಹಕ್ಕು,ಮಕ್ಕಳ ಪೋಷಣೆಯಲ್ಲಿ ಮಾತಾ ಪಿತರ ಪಾತ್ರ ಇದರ ಬಗ್ಗೆ ಸ್ಫಷ್ಟ ಮಾಹಿತಿ ನೀಡಿದರು. 












Wednesday 11 February 2015

ಮೆಟ್ರಿಕ್ ಮೇಳ


       2014-15 ನೇ ಸಾಲಿನ  ಶೈಕ್ಷಣಿಕ ವರ್ಷದಲ್ಲಿ ಬಾಕ್ರಬೈಲು ಎ.ಯು.ಪಿ. ಶಾಲೆಯಲ್ಲಿ ದಿನಾಂಕ 11-2-2015 ನೇ ಬುಧವಾರ ಮೆಟ್ರಿಕ್ ಮೇಳ ಶಿಬಿರದ ಉದ್ಘಾಟನಾ ಸಮಾರಂಭ ಪೂರ್ವಾಹ್ನ 10-30 ಕ್ಕೆ  ಪ್ರಾರ್ಥನೆಯೊಂದಿಗೆ ಜರಗಿತು.ಈ ಶಿಬಿರದ ಉದ್ಘಾಟನೆಯನ್ನು ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ನೆರವೇರಿಸಿದರು.ಈ ಶಿಬಿರದ ಅಧ್ಯಕ್ಷ ಸ್ಥಾನವನ್ನು ವಿ.ಮಾಧವ ನಾವಡ ಹಿರಿಯ ಅದ್ಯಾಪಕ ಬಾಕ್ರಬೈಲು ಇವರು ವಹಿಸಿದ್ದರು. ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್ ಪಿ.ಕೆ.ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಸಹಾಯಕ ಅಧ್ಯಾಪಕರಾದ ರಾಜೇಶ್ ಕಾರಂತ್ ಸ್ವಾಗತಿಸಿದರು. ಶ್ರೀಮತಿ ಸೌಮ್ಯಾರವರು ಕಾರ್ಯಕ್ರಮ ನಿರೂಪಿಸಿದರು.  .ಕಾರ್ಯಕ್ರಮದ ಕೊನೆಗೆ ಸಹಾಯಕ ಅಧ್ಯಾಪಿಕೆ ಹೇಮಲತಾ ಇವರು  ಧನ್ಯವಾದ ಸಮರ್ಪಿಸಿದರು.
ಚೇತನಾ ಚಟುವಟಿಕೆಯಾಗಿ ವಿ.ಮಾಧವ ನಾವಡ ಹಿರಿಯ ಅದ್ಯಾಪಕ ಬಾಕ್ರಬೈಲು ಅವರು ರಚಿಸಿದ ಗೀತೆಯನ್ನು ಶ್ರೀಮತಿ ಚಂದ್ರಿಕಾ, ಶ್ರೀಮತಿ ವಾರಿಜ ರವರು ಹಾಡಿ ಮಕ್ಕಳನ್ನು ಸಕ್ರಿಯವಾಗಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ಬ್ಯಾಡ್ಜ್ ನಿರ್ಮಾಣ
ಪ್ರತೀ ಗುಂಪಿನ  ಬ್ಯಾಡ್ಜ್ ನಿರ್ಮಿಸುವ ಪರಿಕರಗಳನ್ನು ನೀಡಲಾಯಿತು.ಸೂಚನೆಗೆ  ಅನುಸಾರವಾಗಿ ಬ್ಯಾಡ್ಜ್ ನಿರ್ಮಾಣ ನಂತರ ಬ್ಯಾಡ್ಜ್ ನ ಮೌಲ್ಯನಿರ್ಣಯ ನಡೆಸಿ ಅಂಕಗಳನ್ನು ನೀಡಲಾಯಿತು.
ಬೇರೆಬೇರೆತರಕಾರಿಗಳನ್ನು ಗುಂಪಿಗೆ ನೀಡಿ ಭಾರವನ್ನು ಊಹಿಸುವುದು.ನಂತರ ನಿಖರ ಭಾರವನ್ನು ಅಳೆದು ನೋಡುವುದು.ಸರಿಯಾಗಿ ಉಹಿಸಿದ ಗುಂಪನ್ನು ಅಭಿನಂದಿಸಲಾಯಿತು.
6cm,8cm,9cm,ಉದ್ದದ 3 ಸ್ಕೇಲನ್ನುಪ್ರತೀ ಗುಂಪಿಗೆ ನೀಡಲಾಯಿತು.ಇದನ್ನು ಬಳಸಿ ಯಾವೆಲ್ಲಾ ಉದ್ದಗಳನ್ನು ಅಳೆಯಬಹುದು ಎಂಬ ಚಟುವಟಿಕೆಯನ್ನು ನೀಡಲಾಯಿತು.
ಬಾಯಾರಿಕೆ ಇಂಗಿಸುವ
5 ಗ್ಲಾಸ್ ಗಳಲ್ಲಿ ತುಂಬ ನೀರು ಇದೆ. 5 ಗ್ಲಾಸ್ ಗಳಲ್ಲಿ ಅರ್ಧದಷ್ಟು ನೀರು ಇದೆ. 5 ಗ್ಲಾಸ್ ಖಾಲಿ ಇವೆ.ಇದನ್ನು 3 ಮಂದಿಗೆ ಹಂಚಬೇಕು.ಷರತ್ತು ಏನಂದ್ರೆ ಒಂದೇ ಅಳತೆಯ ನೀರು ಸಿಗಬೇಕು.ಒಂದೇ ಸಂಖ್ಯೆಯ ಗ್ಲಾಸು ಸಿಗಬೇಕು.ಇದನ್ನು ಪ್ರತೀ ಗುಂಪಿಗೆ 15 ಕಾಗದದ ತುಂಡನ್ನು ನೀಡಿ ಚಟುವಟಿಕೆ ನಡೆಸಲಾಯಿತು.







  2014-15 ನೇ ಸಾಲಿನ  ಶೈಕ್ಷಣಿಕ ವರ್ಷದಲ್ಲಿ ಬಾಕ್ರಬೈಲು ಎ.ಯು.ಪಿ. ಶಾಲೆಯಲ್ಲಿ ದಿನಾಂಕ 11-2-2015 ನೇ ಬುಧವಾರ ಮೆಟ್ರಿಕ್ ಮೇಳ ಶಿಬಿರದ ಉದ್ಘಾಟನಾ ಸಮಾರಂಭ ಪೂರ್ವಾಹ್ನ 10-30 ಕ್ಕೆ  ಪ್ರಾರ್ಥನೆಯೊಂದಿಗೆ ಜರಗಿತು.ಈ ಶಿಬಿರದ ಉದ್ಘಾಟನೆಯನ್ನು ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ನೆರವೇರಿಸಿದರು.











ಈ ಶಿಬಿರದ ಅಧ್ಯಕ್ಷ ಸ್ಥಾನವನ್ನು ವಿ.ಮಾಧವ ನಾವಡ ಹಿರಿಯ ಅದ್ಯಾಪಕ ಬಾಕ್ರಬೈಲು ಇವರು ವಹಿಸಿದ್ದರು.