2014-15 ನೇ ಸಾಲಿನ
ಶೈಕ್ಷಣಿಕ ವರ್ಷದಲ್ಲಿ ಬಾಕ್ರಬೈಲು ಎ.ಯು.ಪಿ. ಶಾಲೆಯಲ್ಲಿ ದಿನಾಂಕ 11-2-2015 ನೇ ಬುಧವಾರ ಮೆಟ್ರಿಕ್
ಮೇಳ ಶಿಬಿರದ ಉದ್ಘಾಟನಾ ಸಮಾರಂಭ ಪೂರ್ವಾಹ್ನ 10-30 ಕ್ಕೆ ಪ್ರಾರ್ಥನೆಯೊಂದಿಗೆ ಜರಗಿತು.ಈ ಶಿಬಿರದ ಉದ್ಘಾಟನೆಯನ್ನು
ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ನೆರವೇರಿಸಿದರು.ಈ
ಶಿಬಿರದ ಅಧ್ಯಕ್ಷ ಸ್ಥಾನವನ್ನು ವಿ.ಮಾಧವ ನಾವಡ ಹಿರಿಯ ಅದ್ಯಾಪಕ ಬಾಕ್ರಬೈಲು ಇವರು ವಹಿಸಿದ್ದರು.
ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್
ಪಿ.ಕೆ.ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಸಹಾಯಕ ಅಧ್ಯಾಪಕರಾದ ರಾಜೇಶ್ ಕಾರಂತ್ ಸ್ವಾಗತಿಸಿದರು. ಶ್ರೀಮತಿ ಸೌಮ್ಯಾರವರು ಕಾರ್ಯಕ್ರಮ ನಿರೂಪಿಸಿದರು. .ಕಾರ್ಯಕ್ರಮದ ಕೊನೆಗೆ ಸಹಾಯಕ ಅಧ್ಯಾಪಿಕೆ ಹೇಮಲತಾ ಇವರು
ಧನ್ಯವಾದ ಸಮರ್ಪಿಸಿದರು.
ಚೇತನಾ ಚಟುವಟಿಕೆಯಾಗಿ ವಿ.ಮಾಧವ ನಾವಡ ಹಿರಿಯ ಅದ್ಯಾಪಕ ಬಾಕ್ರಬೈಲು ಅವರು ರಚಿಸಿದ ಗೀತೆಯನ್ನು
ಶ್ರೀಮತಿ ಚಂದ್ರಿಕಾ, ಶ್ರೀಮತಿ ವಾರಿಜ ರವರು ಹಾಡಿ ಮಕ್ಕಳನ್ನು ಸಕ್ರಿಯವಾಗಿ ಚಟುವಟಿಕೆಯಲ್ಲಿ
ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ಬ್ಯಾಡ್ಜ್ ನಿರ್ಮಾಣ
ಪ್ರತೀ ಗುಂಪಿನ ಬ್ಯಾಡ್ಜ್ ನಿರ್ಮಿಸುವ
ಪರಿಕರಗಳನ್ನು ನೀಡಲಾಯಿತು.ಸೂಚನೆಗೆ ಅನುಸಾರವಾಗಿ
ಬ್ಯಾಡ್ಜ್ ನಿರ್ಮಾಣ ನಂತರ ಬ್ಯಾಡ್ಜ್ ನ ಮೌಲ್ಯನಿರ್ಣಯ ನಡೆಸಿ ಅಂಕಗಳನ್ನು ನೀಡಲಾಯಿತು.
ಬೇರೆಬೇರೆತರಕಾರಿಗಳನ್ನು ಗುಂಪಿಗೆ ನೀಡಿ ಭಾರವನ್ನು ಊಹಿಸುವುದು.ನಂತರ ನಿಖರ ಭಾರವನ್ನು
ಅಳೆದು ನೋಡುವುದು.ಸರಿಯಾಗಿ ಉಹಿಸಿದ ಗುಂಪನ್ನು ಅಭಿನಂದಿಸಲಾಯಿತು.
6cm,8cm,9cm,ಉದ್ದದ 3 ಸ್ಕೇಲನ್ನುಪ್ರತೀ ಗುಂಪಿಗೆ ನೀಡಲಾಯಿತು.ಇದನ್ನು ಬಳಸಿ ಯಾವೆಲ್ಲಾ ಉದ್ದಗಳನ್ನು
ಅಳೆಯಬಹುದು ಎಂಬ ಚಟುವಟಿಕೆಯನ್ನು ನೀಡಲಾಯಿತು.
ಬಾಯಾರಿಕೆ ಇಂಗಿಸುವ
5 ಗ್ಲಾಸ್ ಗಳಲ್ಲಿ ತುಂಬ ನೀರು ಇದೆ. 5 ಗ್ಲಾಸ್ ಗಳಲ್ಲಿ ಅರ್ಧದಷ್ಟು ನೀರು ಇದೆ. 5 ಗ್ಲಾಸ್
ಖಾಲಿ ಇವೆ.ಇದನ್ನು 3 ಮಂದಿಗೆ ಹಂಚಬೇಕು.ಷರತ್ತು ಏನಂದ್ರೆ ಒಂದೇ ಅಳತೆಯ ನೀರು ಸಿಗಬೇಕು.ಒಂದೇ
ಸಂಖ್ಯೆಯ ಗ್ಲಾಸು ಸಿಗಬೇಕು.ಇದನ್ನು ಪ್ರತೀ ಗುಂಪಿಗೆ 15 ಕಾಗದದ ತುಂಡನ್ನು ನೀಡಿ ಚಟುವಟಿಕೆ
ನಡೆಸಲಾಯಿತು.
2014-15 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಾಕ್ರಬೈಲು ಎ.ಯು.ಪಿ. ಶಾಲೆಯಲ್ಲಿ ದಿನಾಂಕ 11-2-2015 ನೇ ಬುಧವಾರ ಮೆಟ್ರಿಕ್ ಮೇಳ ಶಿಬಿರದ ಉದ್ಘಾಟನಾ ಸಮಾರಂಭ ಪೂರ್ವಾಹ್ನ 10-30 ಕ್ಕೆ ಪ್ರಾರ್ಥನೆಯೊಂದಿಗೆ ಜರಗಿತು.ಈ ಶಿಬಿರದ ಉದ್ಘಾಟನೆಯನ್ನು ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ನೆರವೇರಿಸಿದರು.
ಈ ಶಿಬಿರದ ಅಧ್ಯಕ್ಷ ಸ್ಥಾನವನ್ನು ವಿ.ಮಾಧವ ನಾವಡ ಹಿರಿಯ ಅದ್ಯಾಪಕ ಬಾಕ್ರಬೈಲು ಇವರು ವಹಿಸಿದ್ದರು.
No comments:
Post a Comment