welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 1 June 2015

ಪ್ರವೇಶೋತ್ಸವ 2015-16


         ಬಾಕ್ರಬೈಲು ಎ.ಯು.ಪಿ.ಶಾಲೆಯ 1-6-2015 ಸೋಮವಾರದಂದು 10 ಗಂಟೆಗೆ ಸರಿಯಾಗಿ ಪಿ.ಟಿ.ಎ.ಅಧ್ಯಕ್ಷರಾದ ಇ.ಯಂ.ಇಬ್ರಾಹಿಂ ಅವರ ಘನ ಅಧ್ಯಕ್ಷತೆಯಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಸಭಾಂಗಣದಲ್ಲಿ ಜರಗಿತು.ಈ ಶೈಕ್ಷಣಿಕ ವರ್ಷದ ವಿಶೇಷತೆ ಎಂದರೆ ಪ್ರಿ-ಪ್ರೈಮರಿ ಹಾಗೂ ಆಂಗ್ಲ ಮಾಧ್ಯಮ ಪ್ರಥಮ ತರಗತಿ ಆರಂಭ ಗೊಂಡುದುದೇ ಆಗಿದೆ. ಇದು ನವಚೇತನ ಎಲ್ಲರಲ್ಲೂ ಉಂಟುಮಾಡಿತು.


                                                ಶಾಲಾ ಅಧ್ಯಾಪಿಕೆಯರಿಂದ  ಪ್ರಾರ್ಥನೆ

         ವರ್ಕಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ  ಶ್ರೀ.ಪಿ.ಬಿ.ಅಬೂಬಕರ್ ರವರು ಔಪಚಾರಿಕವಾಗಿ ಉದ್ಘಾಟಿಸಿದರು. ಬಳಿಕ ಶ್ರೀಯುತರು  ಪ್ರಿ-ಪ್ರೈಮರಿ ಹಾಗೂ ಆಂಗ್ಲ ಮಾಧ್ಯಮ ಪ್ರಥಮ ತರಗತಿಯ ಮಕ್ಕಳಿಗೆ ಕಲಿಕಾ ಕಿಟ್ ನ್ನು ನೀಡುವುದರ ಮೂಲಕ ಮಕ್ಕಳಲ್ಲಿ ಸಂತಸದ ಚಿಲುಮೆ ಸಂಚಯನಗೊಳಿಸಿದರು.

ಪ್ರವೇಶೋತ್ಸವ ಗೀತೆಯ ಸಿ.ಡಿ.ಕೇಳುವುದರ ಮೂಲಕ ಇದು  ಎಲ್ಲರಲ್ಲೂ ನವ ಚೈತನ್ಯ ಮೂಡಿಸಿ ತು. 

      ವರ್ಕಾಡಿ ಗ್ರಾಮಪಂಚಾಯತ್ ಅಧ್ಯಕ್ಷೆಯಾದ ಉಮಾವತಿ ಪಿ ಸಾಂತಾ ಅವರು ಮಕ್ಕಳಿಗೆ ಶುಭವನ್ನು ಕೋರಿ ಶಾಲಾಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ದೊರಕುವಂತಾಗಲಿ.  


ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ನಡಿಬೈಲು ಇವರು ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲಿ ಎಂದು ಶುಭಹಾರೈಸಿದರು.





ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಇವರು ಅತಿಥಿಗಳನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಭಾಷಣ ಮಾಡಿದರು.


ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಇವರು ಕಾರ್ಯಕ್ರಮ ನಿರೂಪಿಸಿದರು.
ಪ್ರಿ-ಪ್ರೈಮರಿ ತರಗತಿಗೆ 52 ವಿದ್ಯಾರ್ಥಿಗಳೂ,ಆಂಗ್ಲ ಮಾಧ್ಯಮ ಪ್ರಥಮ ತರಗತಿಗೆ 56 ವಿದ್ಯಾರ್ಥಿಗಳೂ ದಾಖಲಾತಿಯನ್ನು ಪಡೆದಿದ್ದರು. ಬಾಕ್ರಬೈಲು ಶಾಲೆಯ ಚರಿತ್ರೆಯಲ್ಲಿಯೇ ಇದೊಂದು ಮೈಲುಗಲ್ಲಾಗಿದೆ. 





ಈ ಸಂದರ್ಭದಲ್ಲಿ ನಮ್ಮಶಾಲಾ ಅರೇಬಿಕ್ ಅಧ್ಯಾಪಿಕೆ ಫರೀದಾ ರವರು ಎಲ್ಲಾ ವಿದ್ಯಾರ್ಥಿಗಳಿಗೂ ರಕ್ಷಕರಿಗೂ ಸಿಹಿಯನ್ನು ಹಂಚಿದರು.

              ಕಾರ್ಯಕ್ರಮದ ಕೊನೆಯಲ್ಲಿ ಸ್ಟಾಪ್ ಸೆಕ್ರೆಟರಿ ಅಬ್ದುಲ್ ಕರೀಂ ಅವರು ಧನ್ಯವಾದಗೈದರು.



No comments:

Post a Comment