ವಿವೇಕಾನಂದರ ಜನ್ಮದಿನವಾದ ದಿನಾಂಕ 12-1-15 ರಂದು
ಶಾಲಾ ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳಿಗೆ ಶ್ರೀಮತಿ ವಾರಿಜಾರವರು ವಿವೇಕಾನಂದರ ಸಂಪೂರ್ಣ
ಮಾಹಿತಿ,ಜೀವನ ಸಾಧನೆ,ಪ್ರಪಂಚಕ್ಕೆ ಅವರ ಕೊಡುಗೆಯನ್ನು ತಿಳಿಸಿ ಅವರ ಮೌಲ್ಯಗಳು ಇಂದಿಗೂ
ಪ್ರಸ್ತುತ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಯಿತ್ತರು.
ಮಂಜೇಶ್ವರ ಉಪಜಿಲ್ಲಾ ಮಟ್ಟದ BHARAT SCOUT E &
GUIDE RALLY ಯು ಯಶಸ್ವಿಯಾಗಿ ನಡೆಸಲು ಕಾರ್ಯಕಾರಿ ಸಭೆಯನ್ನುರಕ್ಷಕ-ಶಿಕ್ಷಕ ಸಂಘದ
ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 12-1-15 ರಂದು ನಡೆಯಿತು.
C.P.T.A
ದಿನಾಂಕ 12-1-15 ರಂದು ಎರಡನೇ
ಹಂತದ ಮೌಲ್ಯಮಾಪನದ ಸಿ.ಪಿ.ಟಿ.ಎ.ಜರಗಿತು.ಸಭೆಯ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ
ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್ ವಹಿಸಿದ್ದರು.ಈ ಸಭೆಯಲ್ಲಿ
ರಕ್ಷಕ-ಶಿಕ್ಷಕ ಸಂಘದ
ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್,ಯಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಇವರುಗಳು ಹಾಜರಿದ್ದರು.ಶಾಲಾ
ಮುಖ್ಯೋಪಾಧ್ಯಾಯರು ಪರೀಕ್ಷೆ,ಇಂದಿನ ಮೌಲ್ಯಮಾಪನದ ರೀತಿಗಳನ್ನು ರಕ್ಷಕರಿಗೆ ತಿಳಿಸಿದರು.ಈ
ಸಭೆಯಲ್ಲಿ 200ಕ್ಕೂ ಹೆಚ್ಚಿನ ರಕ್ಷಕರು ಹಾಜರಿದ್ದರು.
![]() |
ಅಧ್ಯಾಪಿಕೆ ಶ್ರೀಮತಿ ಹೇಮಲತಾರವರು ಧನ್ಯವಾದಗೈದರು. |
No comments:
Post a Comment