welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Sunday 25 January 2015

ಉದ್ಘಾಟನಾ ಸಮಾರಂಭ






      ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ಸಾಹಸಮಯ ಚಟುವಟಿಕೆಗಳನ್ನು ನಡೆಸಲು ಈ ಸ್ಕೌಟ್ ಶಿಬಿರವು ಒಂದು ಉತ್ತಮ ವೇದಿಕೆಯಾಗಲಿ ಮಂಜೇಶ್ವರ ಉಪಜಿಲ್ಲಾಮಟ್ಟದ BHARAT SCOUT ES & GUIDES  RALLY ಯನ್ನು ಉದ್ಘಾಟಿಸಿ  ವರ್ಕಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಉಮಾವತಿ ಪಿ.ಸಾಂತ ಮಕ್ಕಳಿಗೆ ಕರೆ ನೀಡಿದರು. 




    ಮಂಜೇಶ್ವರ  ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್ ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ BHARAT SCOUT ES & GUIDES  RALLY ಯ ಧ್ಯೇಯೋದ್ದೇಶಗಳು ಹಾಗೂ ಶಿಬಿರಾರ್ಥಿಗಳ ದೇಶಪ್ರೇಮ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ, ಸಹಕಾರ ಮನೋಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವಂತಾಗಲು ಇದೊಂದು ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
      ಅತಿಥಿಗಳಾಗಿ ಆಗಮಿಸಿದ ವರ್ಕಾಡಿ ಗ್ರಾಮ ಪಂಚಾಯತಿನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್ ಆದ ಶ್ರೀಮತಿ ಸುಲೋಚನ ಸಿ.ಶೆಟ್ಟಿ ಇವರು ಈ ಸ್ಕೌಟ್ ಶಿಬಿರವು ಯಶಪ್ರದವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

       ನಿವೃತ್ತ ವಿದ್ಯಾಧಿಕಾರಿಗಳು ಹಾಗೂ  ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ಯಂ.ಜಿ.ನಾರಾಯಣ್ ರಾವ್, ಬಾಕ್ರಬೈಲು  ಶಾಲಾ ಮೇನೇಜರ್ ಶ್ರೀ ಪಿ.ಮೋಹನ್ ರಾವ್, ಮಂಜೇಶ್ವರ ಬಿ.ಪಿ.ಒ ಶ್ರೀ ವಿಜಯ ಕುಮಾರ್, ಬಾಕ್ರಬೈಲು  ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್, ಬಾಕ್ರಬೈಲು  ಶಾಲಾ ಯಂ.ಪಿ.ಟ.ಎ ಅಧ್ಯಕ್ಷೆಯಾದ  ಶ್ರೀಮತಿ ಶಶಿಕಲಾ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್, ಯಸ್.ಯಸ್.ಜಿ .ಸದಸ್ಯರಾದ Ahammad Kunhi ಇವರು ಭಾಗವಹಿಸಿ ಶುಭಾಶಂಸನೆಗೈದರು.

      \  ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವರ್ಕಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ.ಪಿ.ಬಿ.ಅಬೂಬಕ್ಕರ್ ವಹಿಸಿದ್ದರು.ಅವರು ತಮ್ಮ ಭಾಷಣದಲ್ಲಿ,"ಇಂದಿನ ಮಕ್ಕಳೇ ಮುಂದಿನ ಜನಾಂಗ"ಆದ್ದರಿಂದಮಕ್ಕಳು ಈ ಸ್ಕೌಟ್ ಶಿಬಿರದಲ್ಲಿ ಭಾಗವಹಿಸಿ  ದೇಶಪ್ರೇಮ, ಸಹಬಾಳ್ವೆ, ಸಹನೆ, ಪರೋಪಕಾರ ಇವೇ ಮೊದಲಾಮಾನವೀಯ ಗುಣಗಳನ್ನು ಈ ಶಿಬಿರದ ಮೂಲಕ ಬೆಳೆಸಿಕೊಳ್ಳುವಂತಾಗಲಿ ಎಂದು ಕರೆ ನೀಡಿ ಈ ಸ್ಕೌಟ್ RALLYಯು ಯಶಸ್ಸು ಪಡೆಯುವಂತಾಗಲಿ ಎಂದು ಶುಭಹಾರೈಸಿದರು.


      ಮಂಜೇಶ್ವರ ಉಪಜಿಲ್ಲೆಯ ಒಂಭತ್ತು ಶಾಲೆಗಳಿಂದ ಆಗಮಿಸಿದ ಸ್ಕೌಟ್ &ಗೈಡ್ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಲಾಯಿತು.ಈ ಶಿಬಿರದಲ್ಲಿ ಒಟ್ಟು 251 ಶಿಬಿರಾರ್ಥಿಗಳು ಭಾಗವಹಿಸಿದ್ದರು.ಸ್ಕೌಟ್ ವಿದ್ಯಾರ್ಥಿಗಳು ತಮಗೆ ಬೇಕಾದ ಗುಡಾರಗಳನ್ನು ಶಾಲಾ ಮೈದಾನದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿದರು.ಸಂಜೆ 5.೦೦ ಗಂಟೆಗೆ ಶಿಬಿರಾರ್ಥಿಗಳು ಫ್ರೆಂಡ್ ಶಿಪ್ ಗೇಮ್ ಆಡಿದರು.ಸಂಜೆ 6.೦೦ ಗಂಟೆಗೆ ಶಿಬಿರಾರ್ಥಿಗಳು ದೇಶ ಭಕ್ತಿಗೀತೆ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.ರಾತ್ರಿ ೮.೦೦ ಗಂಟೆಗೆ ಶಿಬಿರಾಗ್ನಿ ಚಟುವಟಿಕೆ ನಡೆಯಿತು.ಈ ಎಲ್ಲಾ ಚಟುವಟಿಕೆಗಳು  ಭಾರತ್ ಸ್ಕೌಟ್ಸ್ & ಗೈಡ್ಸ್ ಸಹಾಯಕ ಜಿಲ್ಲಾ ಕಮಿಷನರ್ (ಎ.ಡ.ಸಿ) ಸ್ಕೌಟ್ ತರಬೇತುದಾರರಾದ ಶ್ರೀ ವಿನೋದ್ ಕುಮಾರ್ ಚೇವಾರ್ ಇವರ ನೇತೃತ್ವದಲ್ಲಿ ಜರಗಿತು. 
















        ಬಾಕ್ರಬೈಲು ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಅತಿಥಿಗಳನ್ನು ಸ್ವಾಗತಿಸಿದರು.ಶಾಲಾ ಸಹಾಯಕ ಅಧ್ಯಾಪಕರಾದ ಶ್ರೀ. ಬಿ.ಮೋಹನ ಇವರು ಕಾರ್ಯಕ್ರಮ ನಿರೂಪಿಸಿದರು.ಶ್ರೀ.ಸತ್ಯನಾರಾಯಣ ಭಟ್ ಮುಖ್ಯೋಪಾಧ್ಯಾಯರು ಎ.ಯು.ಪಿ.ಶಾಲೆ ಆನೆಕಲ್ಲು, Treasurer, Bharat Scouts & Guides Manjeshwar Local Association ಇವರು ಅತಿಥಿಗಳನ್ನು ವಂದಿಸಿದರು.



     













1 comment:

  1. CONGRATULATIONS
    THANKFULLY ACKNOWLEDGES HEADMASTER ,STAFF, PTA, MANAGER STUDENTS AND WELLWISHERS .HM'S OF THE SUB DISTRICT ,UNION LEADERS , SCOUT TEACHERS ,SCOUTS STUDENTS FOR THE GRAND SUCCESS OF MANJESHWARA SUB DISTRICT RALLY 2015.

    ReplyDelete