welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Thursday 1 January 2015

ಗಣಿತೋತ್ಸವ ಶಿಬಿರ





ಮರುದಿನ ಮುಂಜಾನೆ ಸೂರ್ಯೋದಯವನ್ನು ವೀಕ್ಷಿಸುತ್ತಿರುವ ಶಿಬಿರಾರ್ಥಿಗಳು 




ಶ್ರೀ ವಾಣಿವಿಜಯಪ್ರೌಢಶಾಲೆ ಕೊಡ್ಲಮೊಗರು ಇಲ್ಲಿನ ಗಣಿತ ಅಧ್ಯಾಪಿಕೆಯಾದ ಆಶಾ ದಿಲೀಪ್ ರವರು ವೇದಗಣಿತವನ್ನು ಪ್ರಾಯೋಗಿಕವಾಗಿ,ಮಕ್ಕಳಲ್ಲಿ ಕೌಶಲ್ಯವನ್ನು ಹೆಚ್ಚಿಸಿ ,ಅದರಲ್ಲಿ ಹೆಚ್ಚು ಆಸಕ್ತಿ ಮೂಡಿಸಿ ರಸವತ್ತಾಗಿಮಕ್ಕಳು ಈ ಗಣಿತ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ  ಮಾಡಿದರು.ಮಕ್ಕಳಿಗೆ ಪ್ರಾಯೋಗಿಕವಾಗಿಪ್ರಶ್ನೆಗಳನ್ನು ನೀಡಿ ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ  ಸ್ಫೂರ್ತಿ ನೀಡಿದರು




 ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಇವರು ಆಗಮಿಸಿ
ವರ್ಗ ಸಂಖ್ಯೆಗಳಿಗೆ ಸಂಬಂಧಿಸಿದ ಗಣಿತದ ಮ್ಯಾಜಿಕ್ ನ್ನು ಕಾರ್ಡುಗಳ ಸಹಾಯದಿಂದ ಮಕ್ಕಳಿಗೆ  ಮನೋಜ್ಞವಾಗಿ ಸ್ಪಷ್ಟಪಡಿಸಿ  ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.




ರಾತ್ರಿ ಎಂಟು ಗಂಟೆಗೆ ಶ್ರೀ ಪದ್ಮನಾಭ ಯಂ ಜಿ.ಎ.ಯು.ಪಿ.ಶಾಲೆ ಮೂಡಂಬೈಲು ಇವರು ಆಗಮಿಸಿ ಒರಿಗಾಮಿ ತರಗತಿಯನ್ನು ನಡೆಸಿ ಮಕ್ಕಳಲ್ಲಿ ಅತ್ಯುತ್ಸಾಹ ಉಂಟುಮಾಡಿದರು.
ಈ ಸಂದರ್ಭದಲ್ಲಿ ಮಂಜೇಶ್ವರ ಬಿ.ಪಿ.ಒ ಪ್ರಭಾರ ಶ್ರೀ ವಿಜಯಕುಮಾರ್ ರವರು ಹಾಜರಿದ್ದು ಶಿಬಿರಾಗ್ನಿಯನ್ನು ಉದ್ಘಾಟಿಸಿ ಮಕ್ಕಳ ಚಟುವಟಿಕೆಯನ್ನು ವೀಕ್ಷಿಸಿಮೆಚ್ಚುಗೆಯನ್ನು ವ್ಯಕ್ತಪಡಿಸಿ ಈ ಶಿಬಿರಕ್ಕೆ ಶುಭಾಶಂಸನೆಗೈದರು.


2014-15 ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ದಿನಾಂಕ 1-1-2015 ಮತ್ತು  2-1-2015ರ ಹೊಸ ವರ್ಷದಲ್ಲಿ ಎರಡು ದಿನದ ಗಣಿತೋತ್ಸವ ಶಿಬಿರವು ಗಣಿತದ ಪ್ರಾರ್ಥನೆಯೊಂದಿಗೆ ಜರಗಿತು


ಶಾಲಾ  ಸಹಾಯಕ ಅದ್ಯಾಪಿಕೆಯಾದ ಶ್ರೀಮತಿಚಂದ್ರಿಕಾರವರು ಅತಿಥಿಗಳನ್ನು ಸ್ವಾಗತಿಸಿದರು.
ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಗಣಿತೋತ್ಸವದ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಿದರು.

ಈ ಶಿಬಿರಕ್ಕೆ ಅತಿಥಿಗಳಾಗಿ ಆಗಮಿಸಿದ್ದ ನಮ್ಮ ಶಾಲಾ ಮೇನೇಜರ್ ಶ್ರೀ ಪಿ.ಮೋಹನ್ ರಾವ್ ಔಪಚಾರಿಕವಾಗಿ ಉದ್ಘಾಟಿಸಿ ಗಣಿತೋತ್ಸವದ ಮಹತ್ವವನ್ನು ಮಕ್ಕಳಿಗೆ ಸ್ಪಷ್ಟ ಪಡಿಸಿದರು.
 ಶ್ರೀಮತಿ ಶಶಿಕಲಾ ಯಂ.ಪಿ.ಟಿ.ಎ. ಅಧ್ಯಕ್ಷೆ ಬಾಕ್ರಬೈಲ್ ಶಾಲೆ ಇವರು ಈ ಶಿಬಿರದಿಂದ ಮಕ್ಕಳಿಗೆ ಹೆಚ್ಚು ಪ್ರಯೋಜನ ಪಡೆಯುವಂತಾಗಲಿ ಎಂದು ಶುಭಾಶಂಸನೆಗೈದರು.

ಬಳಿಕ ಶಾಲಾ ಹಿರಿಯ ಅದ್ಯಾಪಕರಾದ ವಿ.ಮಾಧವ ನಾವಡ ಇವರು ಈ ಗಣಿತೋತ್ಸವವು ಮಕ್ಕಳ ಕಲಿಕೆಗೆ ಹಾಗೂ ನೈಪುಣ್ಯ ಗಳಿಸಲು ಪೂರಕ ಹಾಗೂ ಪ್ರೇರಕವಾಗಲಿ ಎಂದು ಶುಭಾಶಂಸನೆಗೈದರು.

ಈ ಶಿಬಿರದ ಅಧ್ಯಕ್ಷ ಸ್ಥಾನವನ್ನು ಇ.ಯಂ.ಇಬ್ರಾಹಿಮ್  ರಕ್ಷಕ-ಶಿಕ್ಷಕ ಸಂಘ ಬಾಕ್ರಬೈಲ್ ಇವರು ವಹಿಸಿದ್ದರು.ಅವರು ತಮ್ಮ ಭಾಷಣದಲ್ಲಿ ಮಕ್ಕಳಲ್ಲಿ ಗಣಿತದ ಬಗ್ಗೆ  ಹೆಚ್ಚು ಆಸಕ್ತಿ ಮಾಡಲು ಚಿಂತನೆ ಮಾಡಲು ಕೌಶಲ್ಯಬೆಳೆಯಲು ಇದು ಒಂದು ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಕೊನೆಗೆ ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್ ಪಿ.ಕೆ.ಇವರು ಧನ್ಯವಾದ ಸಮರ್ಪಿಸಿದರು.






ಕೈಗಾರಿಕಾ ಕೇಂದ್ರದಲ್ಲಿನ ಗಣಿತ ಎಂಬ ವಿಷಯದಲ್ಲಿ ಮರದ ಕೆಲಸ ಮಾಡುವ  ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ನೌಕರರೊಂದಿಗೆ ಸಂದರ್ಶನ ಮಾಡಿದ ಶಿಬಿರಾರ್ಥಿಗಳು ವಿವಿಧ ಆಕೃತಿಗಳ ನಿರ್ಮಾಣವನ್ನು ನಿರೀಕ್ಷಣೆ ಮಾಡಿ ಗಣಿತದೊಂದಿಗೆ ಕೈಗಾರಿಕಾ ಕೇಂದ್ರದಲ್ಲಿನ ಸಂಬಂಧವನ್ನು ತಿಳಿದುಕ್ಕೊಂಡರು.


ಗಣಿತೋತ್ಸವ ಶಿಬಿರದ ಗಣಿತ ಪ್ರಾರ್ಥನೆ 


ರಚನೆ : ವಿ ಮಾಧವ ನಾವಡ
ಅಧ್ಯಾಪಕರು ಬಾಕ್ರಬೈಲು ಎ.ಯು.ಪಿ.ಶಾಲೆ ಪಾತೂರು.

No comments:

Post a Comment