welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 20 October 2014

ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳ






2014-15 ನೇ ವರ್ಷದ ಶಾಸ್ತ್ರ ಮೇಳದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಿಯಾದ ವಿಧ್ಯಾರ್ಥಿಗಳಿಗೆ ನಮ್ಮ ಶಾಲಾ  ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಅಸ್ಸೆಂಬ್ಲಿ ಯಲ್ಲಿ ಬಹುಮಾನವನ್ನು ವಿತರಿಸಿದರು

ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಯು.ಪಿ.ವಿಭಾಗದ ವರ್ಕಿಂಗ್ ಮೋಡೆಲ್ ನಲ್ಲಿ ಎ ಗ್ರೇಡ್ ನೊಂದಿಗೆ  ದ್ವಿತೀಯ ಸ್ಥಾನವನ್ನು ಲತೇಶ್ ಸಾಂತಾ ಏಳನೇ ತರಗತಿ ಮತ್ತು ಸಫಾ ಏಳನೇ ತರಗತಿ ಇವರು ಪಡೆದು ಜಿಲ್ಲಾ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.

ಉಪಜಿಲ್ಲಾ ಮಟ್ಟದ ಸಮಾಜ-ವಿಜ್ಞಾನ ಮೇಳದಲ್ಲಿ ಯು.ಪಿ.ವಿಭಾಗದ Still model item ನಲ್ಲಿ A Grade ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿನಿಯರಾದ ಕುಮಾರಿ ಸಾರಾಸುನೈನ ಮತ್ತು ಖದೀಜತ್ ಮನ್ಸೂರ ಆರನೇ ತರಗತಿ.


ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ ಎಲ್.ಪಿ.ಮಟ್ಟದ Magazine ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತೇವೆ. Puzzle ವಿಭಾಗದಲ್ಲಿ A Grade ನೊಂದಿಗೆ ತೃತೀಯ ಸ್ಥಾನವನ್ನು ಮೊಹಮ್ಮದ್ ಅಫಸಲ್ ಮೂರನೇ ತರಗತಿ,Geomatric Chart ವಿಭಾಗದಲ್ಲಿ  A Grade ನೊಂದಿಗೆ ತೃತೀಯ ಸ್ಥಾನವನ್ನು ಸುಮನ.ಯನ್. ಮೂರನೇ ತರಗತಿ ಇವರು ಗಳಿಸಿರುತ್ತಾರೆ.ಅಲ್ಲದೆ ಯಲ್.ಪಿ.ವಿಭಾಗದಲ್ಲಿ ದ್ವಿತೀಯ ಚಾಂಪಿಯನ್ ಶಿಪ್ ನ್ನೂ ಪಡೆದಿರುತ್ತೇವೆ. ಯು.ಪಿ.ವಿಭಾಗದ ನಂಬರ್ ಚಾರ್ಟ್ ನಲ್ಲಿ ಫಾತಿಮತ್ ಜಾಫಿರ ಏಳನೇ ತರಗತಿ ಇವಳು A Grade ನೊಂದಿಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ. 
ಯು.ಪಿ.ವಿಭಾಗದ ವೃತ್ತಿ ಮೇಳದ PALM LEAVES ನಲ್ಲಿ ದಿಶಾ.ಯಂ.ಯಚ್. ಸತತವಾಗಿ 5 ನೇ ಬಾರಿಗೆ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ

ಹಾಗೆಯೇ ಎಲ್.ಪಿ.ವಿಭಾಗದ ಅಲೀಮಾ ನಾಲ್ಕನೇ ತರಗತಿ ಪಾಮ್ ಲೀವ್ಸ್  ಪ್ರೊಡಕ್ಟ್ ನಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

No comments:

Post a Comment