welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Saturday 11 October 2014

ಬ್ಲಾಗ್ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕ-ಶಿಕ್ಷಕ ಸಭೆ











2014-2015 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲಾ ಬ್ಲಾಗ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಮಕ್ಕಳ ಕಲಿಕಾಭಿವೃದ್ಧಿ ದಾಖಲೆಯ ಸೂಕ್ತ ಮಾಹಿತಿಯನ್ನು ರಕ್ಷಕರಿಗೆ ನೀಡುವರೆ ರಕ್ಷಕ-ಶಿಕ್ಷಕ ಸಭೆಯನ್ನು ದಿನಾಂಕ 10-10-2014 ರಂದು ಏರ್ಪಡಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಇ.ಯಂ. ಇಬ್ರಾಹಿಂ ಅವರು ವಹಿಸಿಕೊಂಡರು.ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು.ಬಳಿಕ ಅಂದಿನ ಅತಿಥಿಗಳಾದ ಶ್ರೀ.ಪಿ.ಬಿ.ಅಬೂಬಕರ್ ಪ್ರಭಾರ ಅಧ್ಯಕ್ಷರು ವರ್ಕಾಡಿಗ್ರಾಮ ಪಂಚಾಯತ್ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನಂತರ ಶಾಲಾ ಸಹಾಯಕ ಅಧ್ಯಾಪಿಕೆಯಾದ ಶ್ರೀಮತಿ ಚಂದ್ರಿಕಾ.ಕೆ.ಆರ್ ಇವರು ಪ್ರಥಮ ಟರ್ಮ್ ಮೌಲ್ಯಮಾಪನದ ಫಲಿತಾಂಶ ಹಾಗೂ ಹೊಸ ಶಿಕ್ಷಣ ಪದ್ಧತಿಯಲ್ಲಿ ನೀಡುವ ಗ್ರೇಡಿನ ಬಗ್ಗೆ ರಕ್ಷಕರಿಗೆ ಸ್ಫಷ್ಟ ಮಾಹಿತಿಯನ್ನು ನೀಡಿದರು.ಬಳಿಕ ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ನಡಿಬೈಲು ಇವರು ಈ ಬ್ಲಾಗ್ ನಿಂದ ಎಲ್ಲರಿಗೂ ಶಾಲಾ ಕಾರ್ಯಕ್ರಮ ಹಾಗೂ ಕಲಿಕಾ ಅಭಿವೃಧ್ಹಿಯ ಬಗ್ಗೆ ತಿಳಿಯುವಂತಾಗಿದೆ, ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಶುಭಹಾರೈಸಿದರು.ತರುವಾಯ ಪಿ.ಟಿ.ಎ.ಅಧ್ಯಕ್ಷರಾದ ಇ.ಯಂ.ಇಬ್ರಾಹಿಂ ಇವರು ಈ ಬ್ಲಾಗ್ ರಕ್ಷಕರಿಗೆ ಶಾಲೆಯ ಹಾಗೂ ಇಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಯಂ.ಪಿ.ಟಿ.ಎ.ಅಧ್ಯಕ್ಷೆಯಾದ ಶ್ರೀಮತಿ ಶಶಿಕಲಾ ಹಾಗೂ ಯಂ.ಪಿ.ಟಿ.ಎ.ಉಪಾಧ್ಯಕ್ಷೆಯಾದ ಶ್ರೀಮತಿ ಶೋಭಾ ಆರ್ವಾರ್ ಇವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಅತಿಥಿಗಳನ್ನು ಶ್ರೀಮತಿ ಶೈಲಜಾರವರು ಸ್ವಾಗತಿಸಿದರೆ ಶ್ರೀ ಗಣೇಶ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದ ಕೊನೆಗೆ ಶ್ರೀಮತಿ ಹೇಮಲತಾ ಇವರು ಧನ್ಯವಾದ ಸಮರ್ಪಿಸಿದರು

No comments:

Post a Comment