Tuesday, 28 October 2014
Monday, 27 October 2014
Saturday, 25 October 2014
"ವಿಶ್ವಸಂಸ್ಥೆ " ದಿನಾಚರಣೆ
ದಿನಾಂಕ 24-10-2014 ರಂದು ನಮ್ಮ ಶಾಲೆಯಲ್ಲಿ
ವಿಶ್ವಸಂಸ್ಥೆಯ ದಿನವನ್ನು ಆಚರಿಸಲಾಯಿತು.ಸಮಾಜ ಅಧ್ಯಾಪಕರಾದ ಗಣೇಶ್ ಕುಮಾರ್ ರವರು ವಿಶ್ವಸಂಸ್ಥೆ
ಉದಯವಾಗಲು ಕಾರಣಗಳು ಹಾಗೂ ವಿಶ್ವಸಂಸ್ಥೆಯ ಪ್ರಧಾನ ಅಂಗಗಳು, ಸುಮಾರು ಅದರ 20ರಷ್ಟು ಸೇವಾ
ಸಂಸ್ಥೆಗಳ ಪರಿಚಯ ಹಾಗೂ ಈಗ ಅವುಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ
ಯು.ಪಿ.ವಿಧ್ಯಾರ್ಥಿಗಳಿಗೆ ಸೂಕ್ತವಾದ ಮಾಹಿತಿಯನ್ನು ನೀಡಿದರು.
Monday, 20 October 2014
ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳ
2014-15 ನೇ ವರ್ಷದ ಶಾಸ್ತ್ರ ಮೇಳದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಿಯಾದ ವಿಧ್ಯಾರ್ಥಿಗಳಿಗೆ ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಅಸ್ಸೆಂಬ್ಲಿ ಯಲ್ಲಿ ಬಹುಮಾನವನ್ನು ವಿತರಿಸಿದರು
ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಯು.ಪಿ.ವಿಭಾಗದ
ವರ್ಕಿಂಗ್ ಮೋಡೆಲ್ ನಲ್ಲಿ ಎ ಗ್ರೇಡ್ ನೊಂದಿಗೆ
ದ್ವಿತೀಯ ಸ್ಥಾನವನ್ನು ಲತೇಶ್ ಸಾಂತಾ ಏಳನೇ ತರಗತಿ ಮತ್ತು ಸಫಾ ಏಳನೇ ತರಗತಿ ಇವರು
ಪಡೆದು ಜಿಲ್ಲಾ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.
ಉಪಜಿಲ್ಲಾ ಮಟ್ಟದ ಸಮಾಜ-ವಿಜ್ಞಾನ ಮೇಳದಲ್ಲಿ
ಯು.ಪಿ.ವಿಭಾಗದ Still model item ನಲ್ಲಿ A Grade ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿನಿಯರಾದ ಕುಮಾರಿ
ಸಾರಾಸುನೈನ ಮತ್ತು ಖದೀಜತ್ ಮನ್ಸೂರ ಆರನೇ ತರಗತಿ.
ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ ಎಲ್.ಪಿ.ಮಟ್ಟದ Magazine ವಿಭಾಗದಲ್ಲಿ ಪ್ರಥಮ
ಸ್ಥಾನವನ್ನು ಪಡೆದಿರುತ್ತೇವೆ. Puzzle ವಿಭಾಗದಲ್ಲಿ A
Grade ನೊಂದಿಗೆ ತೃತೀಯ ಸ್ಥಾನವನ್ನು ಮೊಹಮ್ಮದ್ ಅಫಸಲ್ ಮೂರನೇ
ತರಗತಿ,Geomatric Chart ವಿಭಾಗದಲ್ಲಿ A Grade ನೊಂದಿಗೆ ತೃತೀಯ
ಸ್ಥಾನವನ್ನು ಸುಮನ.ಯನ್. ಮೂರನೇ ತರಗತಿ ಇವರು ಗಳಿಸಿರುತ್ತಾರೆ.ಅಲ್ಲದೆ ಯಲ್.ಪಿ.ವಿಭಾಗದಲ್ಲಿ
ದ್ವಿತೀಯ ಚಾಂಪಿಯನ್ ಶಿಪ್ ನ್ನೂ ಪಡೆದಿರುತ್ತೇವೆ. ಯು.ಪಿ.ವಿಭಾಗದ ನಂಬರ್ ಚಾರ್ಟ್ ನಲ್ಲಿ
ಫಾತಿಮತ್ ಜಾಫಿರ ಏಳನೇ ತರಗತಿ ಇವಳು A Grade
ನೊಂದಿಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ.
ಯು.ಪಿ.ವಿಭಾಗದ ವೃತ್ತಿ ಮೇಳದ PALM
LEAVES ನಲ್ಲಿ ದಿಶಾ.ಯಂ.ಯಚ್. ಸತತವಾಗಿ 5 ನೇ ಬಾರಿಗೆ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿ
ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ
ಹಾಗೆಯೇ ಎಲ್.ಪಿ.ವಿಭಾಗದ ಅಲೀಮಾ ನಾಲ್ಕನೇ ತರಗತಿ ಪಾಮ್
ಲೀವ್ಸ್ ಪ್ರೊಡಕ್ಟ್ ನಲ್ಲಿ ಎ ಗ್ರೇಡ್ ನೊಂದಿಗೆ
ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
Wednesday, 15 October 2014
ಜಾದೂ ಪ್ರದರ್ಶನ
ದಿನಾಂಕ 13-10-2014 ರಂದು ಶ್ರೀ ಗೋಪಾಲಕೃಷ್ಣ ಶೆಣೈ ಉಡುಪಿ ಇವರು ನಮ್ಮ ಶಾಲಾ ವಿಧ್ಯಾರ್ಥಿಗಳಿಗೆ ಸುಮಾರು 40 ತರಹದ ಜಾದೂ ಪ್ರದರ್ಶನವನ್ನು ಮಾಡಿ ಮಕ್ಕಳನ್ನು ವಿಸ್ಮಯಗೊಳಿಸುವುದರೊಂದಿಗೆ ಮನ ರಂಜಿಸಿದರು. ಕೆಲವೊಂದು ಜಾದೂಗಳನ್ನು ಮಕ್ಕಳು ಸ್ವತಃ ಮಾಡುವಂತೆ ಪ್ರೇರೇಪಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಇವರು ಧನ್ಯವಾದಗೈದರು.
Saturday, 11 October 2014
ಬ್ಲಾಗ್ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕ-ಶಿಕ್ಷಕ ಸಭೆ
Tuesday, 7 October 2014
ವಿಧ್ಯಾರ್ಥಿಗಳಿಗೆ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮ
ವರ್ಕಾಡಿ ಕೃಷಿ ಭವನದ ಸಹಾಯಕ ಕೃಷಿ ಅಧಿಕಾರಿಗಳಾದ ಶ್ರೀ ರಾಧಾಕೃಷ್ಣನ್ ಹಾಗೂ ಆಫೀಸು ಸಿಬ್ಬಂದಿಗಳಾದ ಜನಾರ್ಧನನ್ ಇವರು ನಮ್ಮ ಶಾಲೆಗೆ ಆಗಮಿಸಿ ವಿವಿಧ ರೀತಿಯ ತರಕಾರಿ ಬೀಜಗಳನ್ನು ವಿಧ್ಯಾರ್ಥಿಗಳಿಗೆವಿತರಿಸಿ ಸೂಕ್ತ ಮಾಹಿತಿ ನೀಡಿದರು. ಈ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಹಿರಿಯಅಧ್ಯಾಪಕರಾದ ವಿ.ಮಾಧವ ನಾವಡ ಅವರು ವಹಿಸಿದ್ದರು.ಸಹಾಯಕ ಅಧ್ಯಾಪಕರಾದ ಶ್ರೀ.ಬಿ.ಮೋಹನ ಅವರು ಸ್ವಾಗತಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಚಂದ್ರಿಕಾರವರು ಧನ್ಯವಾದ ಸಮರ್ಪಿಸಿದರು.
Subscribe to:
Posts (Atom)