welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Friday, 14 November 2014

ಮಕ್ಕಳ ದಿನಾಚರಣೆ ಹಾಗೂ ರಕ್ಷಕರ ಸಮ್ಮೇಳನ

ಶ್ರೀ.ಜವಾಹರಲಾಲ್ ನೆಹರೂರವರ ಜನ್ಮದಿನವಾದ ಇಂದು (14-11-14) ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ನೆಹರೂರವರ ಜೀವನ ಚರಿತ್ರೆ,ಅವರು ಮಾಡಿದ ಸಾಧನೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಹಾಯಕ ಅಧ್ಯಾಪಕರಾದ ಗಣೇಶ್ ಕುಮಾರ್ ಇವರು ಮಕ್ಕಳಿಗೆ ತಿಳಿಸಿದರು.ಇದರ ಅಂಗವಾಗಿ ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.


ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಮಕ್ಕಳಿಗೆ ಶಿಕ್ಷಕರ ವತಿಯಿಂದ ಪಾಯಸವನ್ನು ವಿತರಿಸಲಾಗುವುದು ಎಂದು ಶಾಲಾ ಅಸೆಂಬ್ಲಿಯಲ್ಲಿ  ತಿಳಿಸಿದರು. 

ಮಕ್ಕಳ ದಿನಾಚರಣೆಯ ಅಂಗವಾಗಿ ಯಸ್.ಯಸ್.ಎ.ಇದರ ನೇತೃತ್ವದಲ್ಲಿ ಕೇರಳದ ಎಲ್ಲಾ ಶಾಲೆಗಳಲ್ಲೂ ರಕ್ಷಕರಿಗೆ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.ಆ ಪ್ರಯುಕ್ತ ನಮ್ಮ ಶಾಲೆಯಲ್ಲಿ ದಿನಾಂಕ 14-11-14 ರಂದು ರಕ್ಷಕರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮೊದಲಿಗೆ ಶಾಲಾ ವಿಧ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ನಮ್ಮ ಶಾಲಾ ಸಹಾಯಕ ಅಧ್ಯಾಪಕರಾದ ಅಬ್ದುಲ್ ಕರೀಂ ಇವರು ಸ್ವಾಗತಿಸಿದರು.

ಬದಲಾಗುತ್ತಿರುವ ಶಿಕ್ಷಣ ನೀತಿಗೆ ಅನುಗುಣವಾಗಿ ತಮ್ಮ ಮಕ್ಕಳಿಗೆ ಲಭಿಸುವ ಶಿಕ್ಷಣದ ಗುಣಮಟ್ಟವನ್ನು ಖಾತರಿಪಡಿಸಬೇಕಾಗುವುದು ರಕ್ಷಕರ ಕರ್ತವ್ಯವಾಗಿದೆ.ಮಕ್ಕಳ ಕಲಿಕೆಯಲ್ಲಿ ರಕ್ಷಕರಾದ ತಮ್ಮ ಪಾಲುಗಾರಿಕೆಯ ಮಹತ್ವವನ್ನು ಅರಿತುಕೊಂಡಿರಬೇಕು ಎಂಬುದನ್ನು   ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್.ತಮ್ಮ ಪ್ರಾಸ್ತಾವಿಕ ನುಡಿಯನ್ನಾಡಿದರು
ಮಕ್ಕಳ ವಿದ್ಯಾಭ್ಯಾಸದಲ್ಲಿ ಶಿಕ್ಷಕರಿಗೆ ರಕ್ಷಕರು ಹೇಗೆ ಸಹಾಯ ಮಾಡಬೇಕುಎಂದು ತಿಳಿಸುತ್ತಾ,ಕನ್ನಡ ಮಾಧ್ಯಮ ಶಾಲೆಯ ವಿದ್ಯಾಭ್ಯಾಸ ಗುಣಮಟ್ಟವು ಇಂಗ್ಲೀಷ್ ಮಾಧ್ಯಕ್ಕಿಂತ ಉತ್ತಮವಾಗಿದೆ.ಅದನ್ನು ಹೆತ್ತವರು ತಿಳಿದುಕ್ಕೊಳ್ಳಬೇಕು ಎಂದು ವರ್ಕಾಡಿಪಂಚಾಯತಿನ ಉಪಾಧ್ಯಕ್ಷರಾದ ಶ್ರೀ.ಪಿ.ಬಿ.ಅಬೂಬಕರ್ ಅವರು ಕಾರ್ಯಕ್ರಮವನ್ನು ಔಪಚಾರಿಕವಾಗಿ  ಉದ್ಘಾಟಿಸಿದರು. 

ತಾನು ಒಬ್ಬ ರಕ್ಷಕರಾಗಿದ್ದು ತನ್ನ ಕರ್ತವ್ಯವನ್ನು ಯಾವರೀತಿ ನಿಭಾಯಿಸಬೇಕು,ಮಕ್ಕಳ ಬಗ್ಗೆ ಕಾಳಜಿ,ಶಿಕ್ಷಣದ ಗುಣಮಟ್ಟ,ಆರೋಗ್ಯ,ಮಕ್ಕಳ ಸ್ವಭಾವ,ಇತ್ಯಾದಿಗಳ ಬಗ್ಗೆ ರಕ್ಷಕರಿಗೆ ಹೆಚ್ಹಿನ ಅರಿವಿರಬೇಕು.ಮಕ್ಕಳ ಗುಣ ಸ್ವಭಾವ ತಿದ್ದುವಲ್ಲಿ ರಕ್ಷಕರ ಪಾತ್ರ ಅತೀ ಮಹತ್ವವಾದುದು.ಸೌಹಾರ್ದಯುತವಾಗಿ ರಕ್ಷಕರು-ಶಿಕ್ಷಕರು ಇದರ ಬಗ್ಗೆ ಚರ್ಚಿಸುವುದು ಅಗತ್ಯ ಹಾಗೂ ಈ ಕಾರ್ಯಕ್ರಮದ ಫಲಿತಾಂಶ ಉತ್ತಮವಾಗಲಿ ಎಂದು ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀ.ಶಂಕರ ನಾರಾಯಣ ಭಟ್ ನಡಿಬೈಲು ಇವರು ಶುಭ ಹಾರೈಸಿದರು.

ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು.ಮನೆಯ ವಾತಾವರಣ,ಕಲಿಕೆ ಹಾಗೂ ಇತರ ಕ್ಷೇತ್ರಗಳಲ್ಲಿ  ಮಕ್ಕಳಿಗೆ ರಕ್ಷಕರು ನೀಡುವ ಪ್ರೋತ್ಸಾಹ ಯಾವ ರೀತಿಯಿರಬೇಕು.ಮಕ್ಕಳಲ್ಲಿ ಇರಬೇಕಾದ ಮೌಲ್ಯಗಳು,ಮನೋಭಾವ,ಅಭ್ಯಾಸ,ಶಿಸ್ತು,ಶುಚಿತ್ವ,ಹಾಗೂ ಪೋಷಕಾಂಶಯುತ ಆಹಾರವನ್ನು ಒದಗಿಸುವಲ್ಲಿ ರಕ್ಷಕರ ಪಾತ್ರ ಇವುಗಳ ಬಗ್ಗೆ ಚರ್ಚೆ ನಡೆಸಲಾಯಿತು.ಪ್ರಜಾಪ್ರಭುತ್ವದ ವ್ಯವಸ್ಥೆಯ ಅವಕಾಶವನ್ನು ಮಕ್ಕಳಿಗೂ ನೀಡಬೇಕು.ಜೀವನ ಕೌಶಲ್ಯ,ಪಾಠವನ್ನು ನಿಭಾಯಿಸಲಿರುವ ಸಂದರ್ಭವನ್ನು ಉಂಟುಮಾಡಬೇಕು.ಎಂಬಿತ್ಯಾದಿ  ಉತ್ತಮ ವಿಚಾರಗಳ ಬಗ್ಗೆ ಸಹಾಯಕ ಅಧ್ಯಾಪಿಕೆ ಶ್ರೀ.ಮತಿಶಕೀಲ.ವಿ. ಇವರು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಸುಮಾರು 94ರಷ್ಟು ರಕ್ಷಕರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ  ವರ್ಕಾಡಿಪಂಚಾಯತಿನ ಅಧ್ಯಕ್ಷೆ ಶ್ರೀಮತಿ.ಉಮಾವತಿ, ಉಪಾಧ್ಯಕ್ಷರಾದ ಶ್ರೀ.ಪಿ.ಬಿ.ಅಬೂಬಕರ್, P.T.A.ಅಧ್ಯಕ್ಷರಾದ ಇ.ಯಂ.ಇಬ್ರಾಹಿಮ್, ಉಪಾಧ್ಯಕ್ಷರಾದ ಶ್ರೀ.ಶಂಕರ ನಾರಾಯಣ ಭಟ್ ನಡಿಬೈಲು M.P.T.A ಅಧ್ಯಕ್ಷೆ  ಶ್ರೀಮತಿ ಶಶಿಕಲಾ M.P.T.A ಉಪಾಧ್ಯಕ್ಷೆ ಶ್ರೀಮತಿ ಶೋಭಾ ಆರ್ವಾರ್,ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಸಹಾಯಕ ಅಧ್ಯಾಪಿಕೆ 
ಶ್ರೀಮತಿ.ಹೇಮಲತಾ.ಯಂ.ಆರ್.ಇವರು ಧನ್ಯವಾದಗೈದರು.

No comments:

Post a Comment