ಹರಿತ ಕೇರಳ ಪದ್ಧತಿ
ಕೇರಳ ಸರಕಾರದ ವಜ್ರ ಮಹೋತ್ಸವದ
ಸಂದರ್ಭದಲ್ಲಿ ಕೇರಳದ ಪ್ರಗತಿಯ ಹೊಸ ಅಧ್ಯಾಯದ ಭಾಗವಾಗಿ ನವಕೇರಳ ಮಿಶನ್ ನಾಂದಿ ಹಾಡಲಿದೆ.ಹರಿತ
ಕೇರಳ ಆರ್ದ್ರಂ,ಲೈಫ್ ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣೆಯ ಯಜ್ಞ ಎಂಬ ಪದ್ಧತಿಗಳು ನವಕೇರಳ
ಮಿಶನ್ ನ ಭಾಗವಾಗಿದೆ. ಪ್ರಸ್ತುತ ಈ ಮೇಲಿನ ವಿಷಯಗಳಲ್ಲಿ ಶಾಲಾಮಟ್ಟದಲ್ಲಿ ಹರಿತ ಕೇರಳ
ಯೋಜನೆಯನ್ನು ತಯಾರಿಸಿಕೊಂಡು ಶಾಲಾ ಪರಿಸರ ಶುಚಿತ್ವ ಕುಡಿನೀರು ಮೂಲದ ಶುಚೀಕರಣ,ಜನಜಾಗೃತಿ
ಕಾರ್ಯಕ್ರಮ ಮಕ್ಕಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಮೂಲಕ ಹರಿತ ಕೇರಳ ಪದ್ಧತಿಯನ್ನು ಗ್ರಾಮೀಣ ಪ್ರದೇಶವಾದ ಬಾಕ್ರಬೈಲು ಶಾಲೆ
ಮತ್ತು ಪರಿಸರದಲ್ಲಿ ಅನುಷ್ಟಾನಗೊಲಿಸಲಾಯಿತು.
ಹರಿತ ಕೇರಳ ಪದ್ಧತಿಯ ಕುರಿತಾಗಿ ವಿಶೇಷ ಅಸೆಂಬ್ಲಿ
ಹರಿತ ಕೇರಳ ಪದ್ಧತಿಯಮಿಶನ್ ನನ್ನು ಮಕ್ಕಳಿಗೆ ತಲುಪಿಸುವುದಕ್ಕಾಗಿ 1
ರಿಂದ 7 ರವರೆಗಿನ ಎಲ್ಲಾ ಮಕ್ಕಳ ವಿಶೇಷ ಅಸೆಂಬ್ಲಿ ಕರೆಯಲಾಯಿತು.ಪ್ಲಾಸ್ಟಿಕ್ ನಿರ್ಮೂಲನೆ,ಕೃಷಿ
ಸಂರಕ್ಷಣೆ,ನೀರಿನ ಮೂಲಗಳ ಸಂರಕ್ಷಣೆ ಮತ್ತು ಉಳಿವಿಗಾಗಿ ಪ್ರಯತ್ನ,ಮಳೆ ನೀರು ಸಂಗ್ರಹ,ಪರಿಸರ ಮತ್ತು
ವ್ಯಕ್ತಿ ಶುಚಿತ್ವ ಮುಂತಾದ ವಿಚಾರಗಳ ಬಗ್ಗೆ ಮಕ್ಕಳಿಗೆ ಮನವರಿಕೆಯನ್ನು ಮೂಡಿಸುವಂತೆ ಮತ್ತು
ಮಕ್ಕಳು ಸ್ವತಃ ತಮ್ಮನ್ನು ತಾವೇ ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಶಾಲಾ
ಮುಖ್ಯೋಪಾಧ್ಯಾಯರು ಪ್ರೇರೇಪಿಸಿದರು. ಪ್ರತೀ ಮಗು ತನ್ನ ಮನೆಯಲ್ಲಿರುವ ಪ್ಲಾಸ್ಟಿಕ್ ಬಾಟ್ಲಿ ಯಾ
ಉಪಯೋಗ ಶೂನ್ಯವಾಗಿರುವ ಪೆನ್ನು ಇತ್ಯಾದಿಗಳನ್ನು
ತಾರೀಕು 8 ರಂದು ಶಾಲೆಗೆ ತಲುಪಿಸಬೇಕೆಂದು ಹೇಳಿದರು. ಈ ಸಭೆಯ ಅಧ್ಯಕ್ಷ ಸ್ಥಾನವನ್ನು ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಇವರು ವಹಿಸಿದ್ದು ಎಲ್ಲ ಅಧ್ಯಾಪಕ ಬಳಗದವರು
ಪಾಲ್ಗೊಂಡಿದ್ದರು.
ಹರಿತ ಕೇರಳ ಪದ್ಧತಿಗಳಿಗನುಸಾರವಾಗಿ ಶಾಲಾ ಮಟ್ಟದಲ್ಲಿ ಆಯೋಜಿಸಲಾದ
ಕಾರ್ಯಕ್ರಮಗಳು
1.5-12 -2016 ಶಾಲಾ ಪರಿಸರವನ್ನು ಶುಚಿಗೊಳಿಸುವುದು.
2.7-12-2016 ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆಗಳು.
3 8-12-2016 ಅ)ಶಾಲಾ ನೀರಿನ ಮೂಲವನ್ನು ಶುಚಿಗೊಳಿಸಲಾಗುವುದು.
ಆ)ಶಾಲಾ ಮಕ್ಕಳಿಂದ ಜನಜಾಗೃತಿ ಮೂಡಿಸುವ ಮೆರವಣಿಗೆ.
ಇ)
ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹ
ಈ) ಬಹುಮಾನ ವಿತರಣೆ
ಶಾಲಾ ಪರಿಸರವನ್ನು ಶುಚಿಗೊಳಿಸುವುದು.
ಹರಿತ ಕೇರಳದ ಪ್ರಧಾನ ಅಂಶವೇ ಶುಚಿತ್ವ. ಈ ಆಶಯದ ಆಧಾರದಲ್ಲಿ
5-12-೨೦೧೬ ಶುಕ್ರವಾರದಂದು ಬಾಕ್ರಬೈಲು ಎ.ಯು.ಪಿ ಶಾಲಾ ಪರಿಸರ ಹಾಗು ಹತ್ತಿರದ ಅಂಗಡಿ
ಮುಗ್ಗಟ್ಟುಗಳ ಪರಿಸರದ ಆಸುಪಾಸಿನಲ್ಲಿ ಶಾಲಾ ಅಧ್ಯಾಪಕರು ಹಾಗು ವಿದ್ಯಾರ್ಥಿಗಳು ತಮ್ಮ ತಮ್ಮ
ಗುಂಪುಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಹಸಿರು ಕೇರಳ ಎಂಬ ಈ ವಿನೂತನ
ಕಾರ್ಯಕ್ರಮದಿಂದ ಮಕ್ಕಳಿಗೆ ತನ್ನ ಶಾಲೆ ಮತ್ತು ಮನೆ ಸಾಮಾಜಿಕ ಪರಿಸರ ಸ್ವಚ್ಚವಾಗಿರಬೇಕು. ಎಂಬ
ಪರಿಕಲ್ಪನೆ ಬರುವುದು. ಮಾತ್ರವಲ್ಲದೆ ವ್ಯಕ್ತಿ ಶುಸಿತ್ವವೂ ಬೆಳೆಯುತ್ತದೆ. ತನ್ಮೂಲಕ ಇಡೀ ಸಮಾಜ ಸ್ವಚ್ಛ
ಸುಂದರ ಪರಿಸರವಾಗುವುದು.
ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆಗಳು
ದಿನಾಂಕ 7-12-2016 ರಂದು ಹರಿತ ಕೇರಳದ ಪ್ರಯುಕ್ತ ಎಲ್.ಪಿ ಮತ್ತು
ಯು.ಪಿ ವಿಭಾಗದಲ್ಲಿ ರಸಪ್ರಶ್ನೆ, ಚಿತ್ರರಚನೆ ಮತ್ತು ಪ್ರಬಂಧ ಸ್ಪರ್ಧೆಯನ್ನು
ಏರ್ಪಡಿಸಲಾಯಿತು.ಇದರಲ್ಲಿ ವಿಜೇತರಾದ ಸ್ಪರ್ಧಿಗಳನ್ನು ಆರಿಸಲಾಯಿತು.
ದಿನಾಂಕ 8-12-2016
ರಂದು ಶಾಲಾ ನೀರಿನ ಮೂಲವನ್ನು ಶುಚಿಗೊಳಿಸುವುದು
ನೀರು ಅತ್ಯಮುಲ್ಯವಾದುದು. ನೀರಿನ ಮೂಲಗಳನ್ನು
ಸಂರಕ್ಷಣೆಗೊಳಿಸುವುದು ಮತ್ತು ಶುಚಿಯಾಗಿರಿಸಿಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ
ನಮ್ಮ ಶಾಲೆಯ ಕುಡಿನೀರಿನ ಮೂಲವಾದ ಬಾವಿ ನೀರನ್ನು ಖಾಲಿ ಮಾಡಿ ಕೆಸರು ಇನ್ನಿತರ ವಸ್ತುಗಳನ್ನು
ತೆಗೆದು ಕಳೆ ಗಿಡಗಳನ್ನು ಕಿತ್ತು ಬ್ಲೀಚಿಂಗ್ ಪೌಡರನ್ನು ಹಾಕಿ ಶುಚಿಗೊಳಿಸಿ ತಕ್ಕುದಾದ
ರೀತಿಯಲ್ಲಿ ಸಂರಕ್ಷಿಸುವ ಕಾರ್ಯದಲ್ಲಿ. ತೊಡಗಿಸಿಕೊಳ್ಳಲಾಯಿತು.ಮಾತ್ರವಲ್ಲದೆ ಹತ್ತಿರದ
ವೆಲ್ದರನ್ನು ಶಾಲೆಗೇ ಬರಮಾಡಿಕ್ಕೊಂಡು ಬಾವಿಗೆ ತಕ್ಕುದಾದಂತಹ ಕಬ್ಬಿಣದ ಸುರಕ್ಷಾ ಬಲೆಯನ್ನು
ನಿರ್ಮಿಸಲು ತೀರ್ಮಾನಿಸಲಾಯಿತು.
ಶಾಲಾ ಮಕ್ಕಳಿಂದ ಜನಜಾಗೃತಿ ಮೂಡಿಸುವ ಮೆರವಣಿಗೆ.
ನವ ಕೇರಳ ಮಿಶನ್ ಭಾಗವಾಗಿರುವ ಹರಿತ ಕೇರಳ
ಪದ್ಧತಿಯ ಕುರಿತು ಶಾಲಾ ವಿದ್ಯಾರ್ಥಿಗಳ ಜೊತೆಗೆ ಸಮಾಜಕ್ಕೂ ಜನಜಾಗೃತಿಮೂಡಿಸುವ ಉದ್ದೇಶದಿಂದ
ಶಾಲಾ ವಿದ್ಯಾರ್ಥಿಗಳು ಪಂಚಾಯತ್ ಪ್ರತಿನಿಧಿ, ಪಿ.ಟಿ.ಎ. ಹಾಗೂ ಎಮ್.ಪಿ.ಟಿ.ಎ.
ಪದಾಧಿಕಾರಿಗಳನ್ನು ಸೇರಿಸಿಕ್ಕೊಂಡು ಶಾಲೆಯಿಂದ ಬಾಕ್ರಬೈಲು ಜಂಕ್ಷನ್ ನ ವರೆಗೆ
ಘೋಷಣಾವಾಕ್ಯಗಳನ್ನು ಘೋಷಿಸಿಕ್ಕೊಂಡು ಮೆರವಣಿಗೆ ನಡೆಸಲಾಯಿತು. ಅಂಗಡಿ ಪರಿಸರದಲ್ಲಿ ಶಾಲಾ
ಮುಖ್ಯೋಪಾಧ್ಯಾಯರು ಸಮಾಜ ಬಾಂಧವರಲ್ಲಿ ಈ ಕಾರ್ಯಕ್ರಮದ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಿದ್ದು
ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವರ್ಕಾಡಿ ಗ್ರಾಮಪಂಚಾಯತನ್ನು ಪ್ಲಾಸ್ಟಿಕ್ ಮುಕ್ತ
ಪಂಚಾಯತನ್ನಾಗಿ ಮಾಡುವುದು ಹಾಗೆಯೇ ನೀರಿನ ಮೂಲಗಳನ್ನು ಸಂರಕ್ಷಿಸುವುದು. ಪ್ರತಿಯೊಬ್ಬರೂ ತಮ್ಮ
ತಮ್ಮ ಮನೆಯ ಪರಿಸರದಲ್ಲಿ ವಿಷ ಮುಕ್ತ ಹಸಿರು ತರಕಾರಿಗಳನ್ನು ಬೆಳೆಸುವುದರೊಂದಿಗೆ ಕೇರಳ ಸರಕಾರದ ಈ ಮಹತ್ವಾಕಾಂಶೆ ಯೋಜನೆಯ ಯಶಸ್ವಿಗಾಗಿ ಅವಿರತ
ಶ್ರಮಿಸಬೇಕೆಂದು ನೆರೆದ ಸಾರ್ವಜನಿಕರಲ್ಲಿ ವಿನಂತಿಸಿದರು.
ಬಹುಮಾನ ವಿತರಣೆ ಮತ್ತು ಅವಲೋಕನಾ ಸಭೆ
ಹರಿತ ಕೇರಳದ ಪ್ರಯುಕ್ತ ಏರ್ಪ್ಪಡಿಸಿದ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಿ.ಟಿ.ಎ.ಯ ಪರವಾಗಿ ಮಕ್ಕಳ ವಿಶೇಷ ಸಭೆಯಲ್ಲಿ ಪಂಚಾಯತ್ ಪ್ರತಿನಿಧಿ, ಪಿ.ಟಿ.ಎ,ಎಮ್ ಪಿ.ಟಿ.ಎ,ಪದಾಧಿಕಾರಿಗಳ ಸಮ್ಮುಖದಲ್ಲಿ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.ಮಾತ್ರವಲ್ಲದೆ,ನವಕೇರಳಮಿಶನ್ ನ ಭಾಗವಾಗಿರುವ ಹರಿತ ಕೇರಳದ ಕಾರ್ಯಕ್ರಮಗಳ ಬಗ್ಗೆ ಅವಲೋಕನ ಸಭೆಯನ್ನು ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರು ಸಹಿತ ಅಧ್ಯಾಪಕ ಬಳಗದವರೂ ಸಕ್ರಿಯವಾಗಿ ಭಾಗವಹಿಸಿದ್ದರು.
ಮುಂದುವರಿದ ಚಟುವಟಿಕೆ
ಪ್ಲಾಸ್ಟಿಕ್ ಲಕೋಟೆಗಳನ್ನು ನಿರ್ಮೂಲನೆಗೊಳಿಸುವ
ಉದ್ದೇಶದೊಂದಿಗೆ ಶಾಲಾ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಅಧ್ಯಾಪಕರ ಸಹಕಾರದೊಂದಿಗೆ ಮಕ್ಕಳು
ಹಾಗೂ ರಕ್ಷಕರ ಸಹಾಯದಿಂದ ಬಟ್ಟೆಯ ಚೀಲ ಮಾಡುವ ಕಾರ್ಯಾಗಾರವನ್ನು ಸದ್ರಿ ವರ್ಷದಲ್ಲಿ ಕಾರ್ಯಗತಗೊಳಿಸುವುದು,ಈ
ಮೂಲಕ ಮಕ್ಕಳಲ್ಲಿ ಮತ್ತು ರಕ್ಷಕರಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬಳಕೆಯ
ನಿರ್ಮೂಲನಗೊಳಿಸುವುದು,ಶಾಲಾ ಪರಿಸರದಲ್ಲಿ ವಿಷಮುಕ್ತ ಸಾವಯವಾಧಾರಿತ ಹಸಿರು ತರಕಾರಿಯನ್ನು
ಬೆಳೆಸುವುದು,ಶಾಲಾ ನೀರಿನ ಮೂಲಗಳನ್ನು ಸಮಯ ಬಂಧಿತವಾಗಿ ಶುಚಿಗೊಳಿಸುವುದು,ಡ್ರೈ ದಿನ
ಆಚರಿಸುವುದು,ಹ್ಯಾಂಡ್ ವಾಶ್ ದಿನಕ್ಕೆ ಹೆಚ್ಹಿನ ಪ್ರಾಶಸ್ತ್ಯ ನೀಡುವುದು ಮತ್ತು ಈ
ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ಮೊನಿಟರಿಂಗ್ ಗೊಳಪದಿಸುವುದು ಹೀಗೆಯೇ ಹತ್ತು ಹಲವು
ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಮ್ಮಿಕ್ಕೊಳ್ಳುವುದರ ಮೂಲಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ
ನವ ಕೇರಳ ಮಿಶನ್ ನ ಯೋಜನೆಯನ್ನು ಸಾಕ್ಷಾತ್ಕಾರ ಗೊಳಿಸುವುದು ಪ್ರತಿಯೊಬ್ಬ ಕೆರಲಿಗನ ಆದ್ಯ ಕರ್ತವ್ಯವಾಗಿದ್ದು,
ನಾವೆಲ್ಲರೂ ಸರಕಾರದೊಂದಿಗೆ ಕೈ ಜೋಡಿಸೋಣ.
“ಹಸಿರು ಕೇರಳ,ಸುಂದರ ಕೇರಳ”
No comments:
Post a Comment