welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Sunday, 23 August 2015

ಓಣಂ ಆಚರಣೆ


      ಕೇರಳವು ಉತ್ಸವಗಳ ರಾಜ್ಯವಾಗಿದೆ.ಕೇರಳದಲ್ಲಿ ಆಚರಿಸುವ ಹಬ್ಬಗಳಲ್ಲಿ ಪ್ರಧಾನವಾಗಿರುವುದು ಓಣಂ ಹಬ್ಬ ಇದನ್ನು ಹಬ್ಬಗಳ ರಾಜ ಎಂದು ಕರೆಯುತ್ತಾರೆ.ಕೇರಳದಾದ್ಯಂತ ಆಚರಿಸುವಂತೆ ನಮ್ಮ ಶಾಲೆಯಲ್ಲೂ ಕೂಡಾ ಈ ನಾಡ ಹಬ್ಬವನ್ನು ಬಹಳ ಸಂಭ್ರಮದಿಂದ ದಿನಾಂಕ 21-08-15 ರಂದು ಆಚರಿಸಲಾಯಿತು.ಆ ದಿನ ಮಕ್ಕಳಿಗೆ ವಿಶೇಷವಾಗಿ ತರಗತಿವಾರು ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಆ ದಿನ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಓಣಂ ಸದ್ಯವನ್ನು ಏರ್ಪಡಿಸಲಾಯಿತು.ಅಪರಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮವನ್ನು ಹಮ್ಮಿಕ್ಕೊಂಡು ಓಣಂ ಹಬ್ಬವನ್ನು ಆಚರಿಸುವ ಹಿನ್ನೆಲೆ ಹಾಗೂ ಅದರ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಮಕ್ಕಳಿಗೆ ಸ್ಪಷ್ಟಪಡಿಸಿದರು.

















No comments:

Post a Comment