Wednesday, 16 August 2017
Monday, 10 July 2017
Saturday, 8 July 2017
Tuesday, 21 March 2017
Monday, 20 March 2017
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಸೆಮಿನಾರ್
ಕೇರಳ ಸರಕಾರದ ನವಕೆರಳ ಮಿಶನ್ ಯೋಜನೆಯ ಅಂಗವಾಗಿದೆ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ.
ಗುಣಮಟ್ಟದ ಶಿಕ್ಷಣ ಮಗುವಿನ ಮೂಲಭೂತ ಹಕ್ಕಾಗಿದೆ.ಆಧುನಿಕ ತಂತ್ರಜ್ಞಾನ ಹಾಗೂ ಅದಕ್ಕನುಸಾರವಾದ ಪರಿಸರವನ್ನು ಬಳಸಿಕ್ಕೊಂಡು ಬದಲಾಗುತ್ತಿರುವ ಸನ್ನಿವೇಶಕ್ಕೆ ಹೊಂದಿಕ್ಕೊಂಡು ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾದ ಮಹತ್ತಾದ ಜವಾಬ್ದಾರಿ ಸಮಾಜ ಮತ್ತು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೇಲಿರುತ್ತದೆ.ಹಾಗಿರುವಾಗ ಸಾರ್ವಜನಿಕ ಶಿಕ್ಷಣ ರಂಗವನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಹೊನೆಯಾಗಿರುತ್ತದೆ.ಈ ನಿಟ್ಟಿನಲ್ಲಿ ನಮ್ಮ ಶಾಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಸೆಮಿನಾರ್ ಕಾರ್ಯಕ್ರಮವು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಿತು.
HELLO ENGLISH INAUGRATION AND VARIOUS ENGLISH CULTURAL ACTIVITIES
![]() |
Monday, 27 February 2017
ವಿಜ್ಞಾನೋತ್ಸವ
ಎಸ್.ಎಸ್.ಎ ವತಿಯಿಂದ ನಡೆಯುವ ವಿಜ್ಞಾನೋತ್ಸವವು ದಿನಾಂಕ
27-02-2017 ಸೋಮವಾರ ಮತ್ತು 28-02-2017 ಮಂಗಳವಾರದಂದು ನಮ್ಮಶಾಲೆಯಲ್ಲಿ ಜರಗಿತು. ಈ
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್
ಅವರು ವಹಿಸಿಕೊಂಡು ವಿಜ್ಞಾನ ಎಂದರೆ ಏನು ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿ ಭವಿಷ್ಯ
ನಿರೂಪಿಸಲು ಉಪಯೋಗವಾಗುವ ಕೆಲವೊಂದು ಚಟುವಟಿಕೆಗಳು, ಯಾವುದೇ ಸಂದರ್ಭದಲ್ಲೂ ಕೇವಲ ನೋಡದೆ ಅದು
ಹೇಗೆ,ಏನು,ಎಂದು ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು.ಎಂದು ಕಿವಿ ಮಾತನ್ನು ಹೇಳುತ್ತಾ ಐಸಾಕ್
ನ್ಯೂಟನ್ ರಂತಹ ಕೆಲವು ವಿಜ್ಞಾನಿಗಳು ತಮ್ಮ ಕಂಡುಕ್ಕೊಂಡತತ್ವಗಳು ಹಾಗೂ ಒದಗಿದಂತಹ
ಸಂದರ್ಭಗಳನ್ನು ಮಕ್ಕಳ ಮುಂದೆ ತೆರೆದಿಟ್ಟರು.
![]() |
ಮುಕ್ತಾಯ ಗೊಂಡಿತು.
![]() |
![]() |
![]() |
ಬಳಿಕ ಚೇತನಾ ಚಟುವಟಿಕೆಯಾಗಿ ಪ್ರತೀ ಗುಂಪಿಗೂ ಬಾಲೆ ದಿಂಡು,ಸಲಕೆ ತುಂಡು,ಹಿಡಿಸೂಡಿ ಕಡ್ಡಿಯ
ತುಂಡು,ರಬ್ಬರ್ ಬ್ಯಾಂಡ್ ನೀಡಿ ಒಂದು ಚಲಿಸುವ ಉಪಕರಣವನ್ನು ತಯಾರಿಸಲು ನಿರ್ದೇಶಿಸಿದರು.ನಂತರ
ಪ್ರತೀ ಗುಂಪಿಗೂ ಫೋಮ್ ಬೋರ್ಡ್ ತುಂಡು,ಆಣಿ,ರಬ್ಬರ್ ಬ್ಯಾಂಡ್ ಮತ್ತು ನೂಲನ್ನು ನೀಡಲಾಯಿತು.
ನಂತರ ಸಮಸ್ಯೆಯನ್ನು ಮಂಡಿಸಲಾಯಿತು.”ಇಲ್ಲಿ ರಬ್ಬರನ್ನು ಎಳೆದು ಕಟ್ಟಿದ ನೂಲನ್ನು ತುಂಡರಿಸಿದರೆ ಏನಾಗಬಹುದು?”ಎಂದಾಗ ಎಲ್ಲಾ ಗುಂಪಿನವರು Strow
ಮುಂದಕ್ಕೆ ಹೋಗುತ್ತದೆ.ಫೋಮ್ ಬೋರ್ಡ್ ಹಿಂದಕ್ಕೆ ಬರುತ್ತದೆ.ಎಂದು ಮಂಡಿಸಿದರು. ಚಿತ್ರದಲ್ಲಿ
ಕೊಟ್ಟಿರುವಂತೆ ವಸ್ತುಗಳನ್ನು ನೀಡಲಾಯಿತು. ನಂತರ ಪ್ರತಿಯೊಂದು ಗುಂಪಿನವರು ತಮ್ಮ ತಮ್ಮ
ಉತ್ಪನ್ನಗಳನ್ನು ಪ್ರದರ್ಶಿಸಿ ನಿರೀಕ್ಷಣೆ ಯೊಂದಿಗೆ ಕಾರಣವನ್ನು ಕಂಡುಕೊಂಡರು.ಬಳಿಕ ಪ್ರತೀ
ಗುಂಪಿಗೂ ಚಿತ್ರ,Strow,ಪುಗ್ಗೆ,ರಬ್ಬರ್ ಬ್ಯಾಂಡ್, ವಿತರಿಸಲಾಯಿತು.ಎಲ್ಲ ಗುಂಪಿನವರೂ ಪುಗ್ಗೆಗೆ
Strow ಜೋಡಿಸಿ ಪುಗ್ಗೆಯನ್ನು ಊದಿ ಬಿಟ್ಟಾಗ ಚಲಿಸುತ್ತದೆ ಎಂದು ಊಹಿಸಿದರು.ನಂತರ ಎಲ್ಲ
ಗುಂಪಿನವರೂ ಈ ಚಟುವಟಿಕೆಯನ್ನು ನಡೆಸಿ ನಿರೀಕ್ಷಣೆ ಮಾಡಿ ಪುಗ್ಗೆಯಿಂದ ಗಾಳಿ ಹೊರಗೆ ಬರುವಾಗ ಪುಗ್ಗೆಯು ಚಲಿಸಿತು ಎಂದು
ನಿಗಮನಕ್ಕೆ ಬಂದರು. ನಂತರ ಗಾಳಿಯಲ್ಲಿ ಚಲಿಸುವ ಬೆಲೂನ್
ಮಾದರಿಯಂತೆ ನೆಲದಲ್ಲೂ,ನೀರಿನಲ್ಲೂ ಚಲಿಸುವ ಗಾಡಿಯ ಮಾದರಿಯನ್ನು ರೂಪಿಸುವತೆ
ಹೇಳಲಾಯಿತು.ಹೆಚ್ಚಿನ ಗುಂಪಿನವರು ಬಾಟಲಿ ಗಾಡಿಗೆ ಪುಗ್ಗೆಯನ್ನು ಸೇರಿಸಿ ಚಲಿಸುವಂತೆ ಮಾಡಲು ಸಾಧ್ಯವಿದೆ ಎಂದರು. ಇದರಂತೆ ಎಲ್ಲಾ ಗುಂಪಿಗೂ ಬಾಟಲಿ,ಮುಚ್ಚಳ,ಪುಗ್ಗೆ,Strow ,ರಿಫಿಲ್
ನೀಡಲಾಯಿತು.ಎಲ್ಲಾ ಗುಂಪಿನವರೂ ಪುಗ್ಗೆಯನ್ನು ಬಾಟಲಿಯ ಮೇಲೆ Strow ಸಹಾಯದಿಂದ ಜೋಡಿಸಿ ಚಲಿಸುವ
ಗಾಡಿಯನ್ನು ನಿರ್ಮಿಸಿ ಪ್ರದರ್ಶಿಸಿದರು.ಇದರ ತತ್ವವನ್ನು ಎಲ್ಲರೂ ಮಂಡಿಸಿದರು.ಆರನೇ ತರಗತಿಯ
ವಿದ್ಯಾರ್ಥಿ ಇಬ್ರಾಹಿಮ್ ಸಾನಿದ್ ಎರಡು ಪುಗ್ಗೆಯನ್ನು ಬಾಟಲಿಗೆ Fix ಮಾಡಿ ಗಾಡಿಯನ್ನು ವೇಗವಾಗಿ
ಚಲಿಸುವಂತೆ ಮಾಡಿ ತನ್ನ ಸೃಜನ ಶೀಲತೆಯನ್ನು ಪ್ರದರ್ಶಿಸಿದನು.
ನೆಲದಲ್ಲಿ ಚಲಿಸುವ ಗಾಡಿಯ ಮಾದರಿಯಂತೆ ನೀರಿನಲ್ಲಿ ಚಲಿಸುವ ಗಾಡಿಯನ್ನೂ ಕೂಡಾ ಪ್ರತೀ
ಗುಂಪಿನವರು ಕೊಟ್ಟಿರುವ ಸಾಮಗ್ರಿಗಳ ಸಹಾಯದಿಂದ ತಯಾರಿಸಿ ಪ್ರದರ್ಶಿಸಿದರು.ಇದರ ಕಾರ್ಯ
ವಿಧಾನವನ್ನು ಗುಂಪಿನಲ್ಲಿ ಚರ್ಚಿಸಿ ಮಂಡಿಸಿದರು ಇಲ್ಲಿಗೆ ಮೊದಲ ದಿನದ ಚಟುವಟಿಕೆಗಳನ್ನು
ಕೊನೆಗೊಳಿಸಲಾಯಿತು.
ಒಂದನೇ ದಿನದ ಚಟುವಟಿಕೆಯನ್ನು ಮುಂದುವರಿಸುತ್ತಾ ಎರಡನೇ ದಿನಕ್ಕೆ ಹೆಜ್ಜೆಯನ್ನಿಟ್ಟೆವು.ಆರಂಭದಲ್ಲೇ
ಪ್ರತೀ ಗುಂಪಿಗೂ ಬಹಳ ರೋಮಾಂಚನಕಾರಿಯಾದ ಬಲೂನ್ ರಾಕೆಟ್ ನ್ನು ತಯಾರಿಸುವಂತೆ ಸೂಚಿಸಲಾಯಿತು.ಅದಕ್ಕಾಗಿ
ಪ್ರತೀ ಗುಂಪಿಗೂ Straw,ಪುಗ್ಗೆ,ನೂಲನ್ನು ನೀಡಲಾಯಿತು. ಎಲ್ಲಾ ಗುಂಪಿನವರೂ ಬಹಳ ಆಸಕ್ತಿಯಿಂದ ನೂಲನ್ನುಕಟ್ಟಿ
Straw ಒಳಗೆ ಹಗ್ಗವನ್ನು ತುರುಕಿಸಿ ಚಲಿಸುವಂತೆ ಮಾಡಲಾಯಿತು.ನೂಲಿನ ಮೂಲಕ ಪುಗ್ಗೆ ವೇಗವಾಗಿ
ಮುಂದಕ್ಕೆ ಚಲಿಸುತ್ತದೆ.ಪುಗ್ಗೆಯ ವಾಯು ಮುಗಿದಾಗ ಚಲನೆ ನಿಲ್ಲುತ್ತದೆ.ಎಂಬ ನಿರೀಕ್ಷಣೆ ಯೊಂದಿಗೆ
ನಿಗಮನಕ್ಕೆ ಬರಲಾಯಿತು.ನಂತರ ನೆಲ ಚಕ್ರವನ್ನು ಉರಿಸಲಾಯಿತು.ಉದ್ಘಾಟನೆಯಲ್ಲಿ ಉಡಾಯಿಸಿದ ರಾಕೆಟ್
ಮೇಲೆ ಹೋಗುವುದಕ್ಕೂ,ನೆಲಚಕ್ರ ತಿರುಗಲು ಕಾರಣವೇನು ಎಂಬುದನ್ನು ಚರ್ಚೆಗೋಸ್ಕರ ಮಕ್ಕಳ
ಮುಂದಿಡಲಾಯಿತು.
ಆಗ ಐದನೇ ತರಗತಿಯ ವಿದ್ಯಾರ್ಥಿಯು ನೆಲಚಕ್ರದಲ್ಲಿ ಮದ್ದನ್ನು ಸುರುಳಿಯಾಕಾರದಲ್ಲಿ ಸುತ್ತಿರುವುದೇ ಇದಕ್ಕೆ ಕಾರಣ ಎಂಬ ಉತ್ತರವನ್ನು ಕೊಟ್ಟನು.ಇದರಿಂದ ಎಲ್ಲ ಗುಂಪಿನವರೂ ಸ್ಫಷ್ಟ ನಿಗಮನಕ್ಕೆ ಬಂದರು.
ತದನಂತರ ಗುಂಪಿಗೊಂದರಂತೆ ಪುಗ್ಗೆ,Bend strow, ರಬ್ಬರ್ ಬ್ಯಾಂಡ್ ನೀಡಲಾಯಿತು.ಗುಂಪಿನ ಎಲ್ಲಾ ಮಕ್ಕಳು ಪುಗ್ಗೆಗೆ Bend strow ಜೋಡಿಸಿ , ರಬ್ಬರ್ ಬ್ಯಾಂಡ್ ನ್ನು ಕಟ್ಟಿದರು.ಎಲ್ಲ ಗುಂಪಿನಿಂದಲೂ Display ಮಾಡಲಾಯಿತು.
ಪುಗ್ಗೆಯಿಂದ ಗಾಳಿ Straw ದ ಮೂಲಕ ಹೊರಗೆಬರುವಾಗ ಉಂಟಾಗುವ ವಿರುದ್ಧ ಬಲವು ಪುಗ್ಗೆಯನ್ನು
ತಿರುಗಿಸುತ್ತದೆ.ಎಂಬ ನಿಗಮನಕ್ಕೆ ಬರಲಾಯಿತು. ನಂತರ ಪ್ರತೀ ಗುಂಪಿಗೂ ಇನ್ನೊಂದು ಚೇತೋಹಾರಿ ಚಟುವಟಿಕೆ ನೀರು ತುಂಬಿಸಿದಾಗ ತಿರುಗುವ
ಗ್ಲಾಸ್ ಎಂಬ ಮಾದರಿಯನ್ನು ತಯಾರಿಸಲು ಬೇಕಾದ ಪೇಪರ್ ಗ್ಲಾಸ್, Bend strow,ನೂಲು,ನೀರು
ಇತ್ಯಾದಿಗಳನ್ನು ನೀಡಲಾಯಿತು.ಎಲ್ಲಾ ಗುಂಪುಗಳು ಈ ಮಾದರಿಯನ್ನು ತಯಾರಿಸಿ Display
ಮಾಡಿದರು.ನೂಲಿನ ಸಹಾಯದಿಂದ ಗ್ಲಾಸನ್ನು ಎತ್ತಿ ಹಿಡಿದಾಗ ಗ್ಲಾಸ್ ನ ಎರಡೂ ಬದಿಗಳ Bend strow
ದಿಂದ ನೀರು ಹೊರ ಬರುವಾಗ ಉಂಟಾಗುವ ವಿರುದ್ಧ ಬಲದಿಂದ ಗ್ಲಾಸ್ ತಿರುಗಿತು ಎಂಬ ನಿಗಮನಕ್ಕೆ
ತಲುಪಲಾಯಿತು.
ನಂತರ ಬಿಸಿಲ ಧಗೆಯನ್ನು ನೀಗಿಸಲೋಸುಗ ತಂಪು ಪಾನೀಯವನ್ನು ನೀಡಲಾಯಿತು.ನಂತರ ಮಕ್ಕಳನ್ನು ಹೊರಗಡೆ ಕರೆದುಕ್ಕೊಂಡು ಹೋಗಿ ಅನುಯೋಜ್ಯವಾದ ಮರಳ ಮೇಲೆ ಜಿಗಿತ ಎಂಬ ಚಟುವಟಿಕೆಯನ್ನು ನಡೆಸಲಾಯಿತು.ಇಲ್ಲಿ ಎಲ್ಲಾ ಮಕ್ಕಳು ಮರಳ ಮೇಲೆ ಮುಂದೆ ಹಾರುವಾಗಲೂ ಕಾಲಿನಡಿಯ ಮರಳು ಹಿಂದಕ್ಕೆ ಚಲಿಸುತ್ತದೆ ಎಂದು ನಿರೀಕ್ಷಿಸಲಾಯಿತು.ಆದರೆ ಇಲ್ಲಿ ಮರಳು ಸ್ವಲ್ಪವೂ ಹಾರದೆ ಮುಂದೆ ಜಿಗಿಯಲು ಸಾಧ್ಯವಾಗಲಿಲ್ಲ.ಆದರೆ ಇದಕ್ಕೆ ಬಲವಾದ ಕಾರಣ ಒಂದಿದೆ.ಅದಾವುದೆಂದರೆ ಹಿಂದಕ್ಕೆ ಬಲ ಪ್ರಯೋಗಿಸಿದರೆ ಮಾತ್ರ ನಮಗೆ ಮುಂದೆ ಹಾರಲು ಸಾಧ್ಯ.ಪ್ರಕೃತಿಯಲ್ಲಿ ನಡೆಯುವ ವಿಜ್ಞಾನದ ಈ ನಿಗೂಢ ತತ್ವ ಎಲ್ಲರಿಗೂ ಮನದಟ್ಟಾಯಿತು.ಇದೇ ತತ್ವದ ಆಧಾರದಲ್ಲಿ ಒಂದು ಆಟಿಕೆಯಾದ ಮಡಲಗರಿಯನ್ನು ಸೀಳುವಾಗ ಒಂದು ತುದಿ ಮೇಲೆ ಹಾರುತ್ತದೆ ಎಂಬುದನ್ನು ಪರಿಚಯಿಸಲಾಯಿತು.ನಂತರ ಶಿಬಿರಾರ್ಥಿಗಳು ಸಭಾಂಗಣದಲ್ಲಿ ಮತ್ತೊಮ್ಮೆ ಗುಂಪಿನಲ್ಲಿ ಸೇರಿ ಇಷ್ಟವಿರುವ ಪ್ರಾಣಿಗಳ ಚಲನೆಯ ಅನುಕರಣೆಯನ್ನು ಬಹಳ ಕುತೂಹಲಕಾರಿಯಾಗಿ ಪ್ರದರ್ಶಿಸಿದರು.ತದನಂತರ ವಿವಿಧ ಪ್ರಾಣಿಗಳ ಚಲನ-ವಲನಗಳ ವೀಡಿಯೊ ಕ್ಲಿಪ್ಪಿಂಗ್ ನ್ನು LCD ಯಲ್ಲಿ ಪ್ರದರ್ಶಿಸಲಾಯಿತು.ವೀಕ್ಷಣೆಯ ಬಳಿಕ ಮಕ್ಕಳಿಗೆ ತಾವು ಮೊದಲು ತಿಳಿದುಕ್ಕೊಂಡ ನಿಗಮನವು ಮಕ್ಕಳ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾಯಿತು.ನಂತರ ಅನ್ವೇಷಣೆಯಲ್ಲಿ ಮುಳುಗಿದ Little Scienist ಗಳಿಗೆ ಭೋಜನ ವಿರಾಮ ನೀಡಲಾಯಿತು.
ಮಧ್ಯಾಹ್ನದ ನಂತರದ Session ಲ್ಲಿ ನಿನ್ನೆಯಿಂದಾದ ಎಲ್ಲಾ ಚಟುವಟಿಕೆಗಳ ಅವಲೋಕನ ಮಾಡಿ ಮಕ್ಕಳಿಗೆ ಇನ್ನಷ್ಟು ಮನದಟ್ಟುಗೊಳಿಸಲು ಸಹಾಯವಾಗುವಂತಹ ವರ್ಕ್ ಶೀಟನ್ನು ನೀಡಿ ಪೂರ್ತಿಗೊಲಿಸುವತೆ ನಿರ್ದೇಶಿಸಲಾಯಿತು.ಹೀಗೆ ಶಿಬಿರದ ಚಟುವಟಿಕೆಗಳಿಗೆ ವಿರಾಮ ಹಾಕಲಾಯಿತು.
ಆಗ ಐದನೇ ತರಗತಿಯ ವಿದ್ಯಾರ್ಥಿಯು ನೆಲಚಕ್ರದಲ್ಲಿ ಮದ್ದನ್ನು ಸುರುಳಿಯಾಕಾರದಲ್ಲಿ ಸುತ್ತಿರುವುದೇ ಇದಕ್ಕೆ ಕಾರಣ ಎಂಬ ಉತ್ತರವನ್ನು ಕೊಟ್ಟನು.ಇದರಿಂದ ಎಲ್ಲ ಗುಂಪಿನವರೂ ಸ್ಫಷ್ಟ ನಿಗಮನಕ್ಕೆ ಬಂದರು.
ತದನಂತರ ಗುಂಪಿಗೊಂದರಂತೆ ಪುಗ್ಗೆ,Bend strow, ರಬ್ಬರ್ ಬ್ಯಾಂಡ್ ನೀಡಲಾಯಿತು.ಗುಂಪಿನ ಎಲ್ಲಾ ಮಕ್ಕಳು ಪುಗ್ಗೆಗೆ Bend strow ಜೋಡಿಸಿ , ರಬ್ಬರ್ ಬ್ಯಾಂಡ್ ನ್ನು ಕಟ್ಟಿದರು.ಎಲ್ಲ ಗುಂಪಿನಿಂದಲೂ Display ಮಾಡಲಾಯಿತು.
ನಂತರ ಬಿಸಿಲ ಧಗೆಯನ್ನು ನೀಗಿಸಲೋಸುಗ ತಂಪು ಪಾನೀಯವನ್ನು ನೀಡಲಾಯಿತು.ನಂತರ ಮಕ್ಕಳನ್ನು ಹೊರಗಡೆ ಕರೆದುಕ್ಕೊಂಡು ಹೋಗಿ ಅನುಯೋಜ್ಯವಾದ ಮರಳ ಮೇಲೆ ಜಿಗಿತ ಎಂಬ ಚಟುವಟಿಕೆಯನ್ನು ನಡೆಸಲಾಯಿತು.ಇಲ್ಲಿ ಎಲ್ಲಾ ಮಕ್ಕಳು ಮರಳ ಮೇಲೆ ಮುಂದೆ ಹಾರುವಾಗಲೂ ಕಾಲಿನಡಿಯ ಮರಳು ಹಿಂದಕ್ಕೆ ಚಲಿಸುತ್ತದೆ ಎಂದು ನಿರೀಕ್ಷಿಸಲಾಯಿತು.ಆದರೆ ಇಲ್ಲಿ ಮರಳು ಸ್ವಲ್ಪವೂ ಹಾರದೆ ಮುಂದೆ ಜಿಗಿಯಲು ಸಾಧ್ಯವಾಗಲಿಲ್ಲ.ಆದರೆ ಇದಕ್ಕೆ ಬಲವಾದ ಕಾರಣ ಒಂದಿದೆ.ಅದಾವುದೆಂದರೆ ಹಿಂದಕ್ಕೆ ಬಲ ಪ್ರಯೋಗಿಸಿದರೆ ಮಾತ್ರ ನಮಗೆ ಮುಂದೆ ಹಾರಲು ಸಾಧ್ಯ.ಪ್ರಕೃತಿಯಲ್ಲಿ ನಡೆಯುವ ವಿಜ್ಞಾನದ ಈ ನಿಗೂಢ ತತ್ವ ಎಲ್ಲರಿಗೂ ಮನದಟ್ಟಾಯಿತು.ಇದೇ ತತ್ವದ ಆಧಾರದಲ್ಲಿ ಒಂದು ಆಟಿಕೆಯಾದ ಮಡಲಗರಿಯನ್ನು ಸೀಳುವಾಗ ಒಂದು ತುದಿ ಮೇಲೆ ಹಾರುತ್ತದೆ ಎಂಬುದನ್ನು ಪರಿಚಯಿಸಲಾಯಿತು.ನಂತರ ಶಿಬಿರಾರ್ಥಿಗಳು ಸಭಾಂಗಣದಲ್ಲಿ ಮತ್ತೊಮ್ಮೆ ಗುಂಪಿನಲ್ಲಿ ಸೇರಿ ಇಷ್ಟವಿರುವ ಪ್ರಾಣಿಗಳ ಚಲನೆಯ ಅನುಕರಣೆಯನ್ನು ಬಹಳ ಕುತೂಹಲಕಾರಿಯಾಗಿ ಪ್ರದರ್ಶಿಸಿದರು.ತದನಂತರ ವಿವಿಧ ಪ್ರಾಣಿಗಳ ಚಲನ-ವಲನಗಳ ವೀಡಿಯೊ ಕ್ಲಿಪ್ಪಿಂಗ್ ನ್ನು LCD ಯಲ್ಲಿ ಪ್ರದರ್ಶಿಸಲಾಯಿತು.ವೀಕ್ಷಣೆಯ ಬಳಿಕ ಮಕ್ಕಳಿಗೆ ತಾವು ಮೊದಲು ತಿಳಿದುಕ್ಕೊಂಡ ನಿಗಮನವು ಮಕ್ಕಳ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾಯಿತು.ನಂತರ ಅನ್ವೇಷಣೆಯಲ್ಲಿ ಮುಳುಗಿದ Little Scienist ಗಳಿಗೆ ಭೋಜನ ವಿರಾಮ ನೀಡಲಾಯಿತು.
ಮಧ್ಯಾಹ್ನದ ನಂತರದ Session ಲ್ಲಿ ನಿನ್ನೆಯಿಂದಾದ ಎಲ್ಲಾ ಚಟುವಟಿಕೆಗಳ ಅವಲೋಕನ ಮಾಡಿ ಮಕ್ಕಳಿಗೆ ಇನ್ನಷ್ಟು ಮನದಟ್ಟುಗೊಳಿಸಲು ಸಹಾಯವಾಗುವಂತಹ ವರ್ಕ್ ಶೀಟನ್ನು ನೀಡಿ ಪೂರ್ತಿಗೊಲಿಸುವತೆ ನಿರ್ದೇಶಿಸಲಾಯಿತು.ಹೀಗೆ ಶಿಬಿರದ ಚಟುವಟಿಕೆಗಳಿಗೆ ವಿರಾಮ ಹಾಕಲಾಯಿತು.
ಸಮಾರೋಪ ಸಮಾರಂಭವು ಅಪರಾಹ್ನ 3.00 ಗಂಟೆಗೆ ಸರಿಯಾಗಿ ವಿಜ್ಞಾನೋತ್ಸವಕ್ಕೆ
ರಚಿಸಿದ ಗೀತೆಯನ್ನು ಪ್ರಾರ್ಥನಾ ಗೀತೆಯಾಗಿ ಹಾಡುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭ ವಾಯಿತು.ಈ
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್
ನಡಿಬೈಲು ಅವರು ಮಾತನಾಡಿ ವಿಶ್ವ ವಿಜ್ಞಾನ ದಿನವಾದ ಇಂದು ದಿನದ ಮಹತ್ವವನ್ನು ಹೇಳುತ್ತಾ
ವಿಜ್ಞಾನದ ತತ್ವ ಎಲ್ಲಾ ಕಡೆ ಹರಡಿದೆ.ಆದುದರಿಂದ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ಭಾರತವು
ಪ್ರಪಂಚದಲ್ಲೇ ಅತ್ಯುನ್ನತಕ್ಕೇರಿದೆ ಎನ್ನುತ್ತಾ ಮಕ್ಕಳಲ್ಲಿ ಈ ಉತ್ಸಾಹ ಲವ ಲವಿಕೆ ಸದಾ ಇರಲಿ
ಎಂದು ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಅವರು ಇಲ್ಲಿ
ತಿಳಿದುಕ್ಕೊಂಡ ವಿಚಾರ ನಿಂತ ನೀರಾಗದೆ ನಿರಂತರ ಮುಂದುವರಿಯಬೇಕು.ಈ ಎರಡು ದಿವಸಗಳ ಶಿಬಿರವು
ಮಕ್ಕಳ ಮನ ಮುಟ್ಟಿದೆ ಎಂಬುದಕ್ಕೆ ಅವರು ಅಭಿವ್ಯಕ್ತಿಸಿದ ಅನಿಸಿಕೆಗಳೇ ನಿದರ್ಶನ ಎಂದು ಸಂತೋಷ
ವ್ಯಕ್ತಪಡಿಸಿದರು. ನಮ್ಮ ವಾರ್ಡ್ ಮೆಂಬರ್ ಶ್ರೀಮತಿ ಮೈಮೂನಾ ಅವರು ಈ ವಿಜ್ಞಾನೋತ್ಸವದಲ್ಲಿ ನೀವು
ಸ್ವತಃ ಉಪಕರಣಗಳನ್ನು ನಿರ್ಮಿಸಿ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪ್ರಯೋಗ
ಸಾಧ್ಯತೆಗಳ ಮೂಲಕ ಕಂಡು ಕೊಂಡಿದ್ದೀರಿ. ಇದು
ನಿಮಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ ಅನ್ವೇಷಣಾತ್ಮಕ ಚಿಂತನೆ ನಿಮ್ಮಲ್ಲಿ ಉಂಟಾಗಲು ಸಾಧ್ಯ
ಎಂದು ಹಾರೈಸಿದರು.ಹಿರಿಯ ಅಧ್ಯಾಪಕರಾದ ಶ್ರೀ ಅಬ್ದುಲ್ ಖಾದರ್ ಅವರು ಶಿಬಿರದ ಕುರಿತು ತಮ್ಮ
ಉತ್ತಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಸಹ ಅಧ್ಯಾಪಿಕೆಯಾದ ಶ್ರೀಮತಿ ಅಮಿತ ರವರು ಕಾ.ರ್ಯಕ್ರಮವನ್ನು
ನಿರೂಪಿಸಿದರೆ,ರೀಮತಿ ಶಕೀಲಾ ರವರು ಎರಡು ದಿವಸದ ಶಿಬಿರದ ಕಾರ್ಯ ವೈಖರಿಯನ್ನು
ಮಂಡಿಸಿದರು.ವಿಜ್ಞಾನ ಅಧ್ಯಾಪಕರಾದ ಶ್ರೀ ರಾಜೇಶ್ ಕಾರಂತ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ
ಸ್ವಾಗತಿಸಿದರು.ಸಹ ಅಧ್ಯಾಪಕರಾದ ಶ್ರೀ ಗಣೇಶ ಕುಮಾರ್ ಅವರು ವಂದಿಸಿದರು.ಕೊನೆಗೆ ರಾಷ್ಟ್ರ
ಗೀತೆಯೊಂದಿಗೆ ವಿಜ್ಞಾನೋತ್ಸವ-2017 ಈ ಎರಡು
ದಿವಸದ ಶಿಬಿರವು ಸಂಪನ್ನಗೊಂಡಿತು.
Subscribe to:
Posts (Atom)